Thursday, 16 February 2012





ಮುಂಬಾಗಿಲಿಗೆ 'ರಂಗವಲ್ಲಿ' ಹೇಗೆ ಶೋಭೆಯೋ
ಮುಂಬಾಗಿಲಿಗೆ 'ಹಸಿರು ತೋರಣ' ಹೇಗೆ ಶೋಭೆಯೋ
ಹಾಗೆ ಆಕಾಶಕ್ಕೆ ಸೂರ್ಯ - ಚಂದ್ರರು ಶೋಭೆ
ಹಣೆಗೆ ಕುಂಕುಮ ಶೋಭೆ ; ಹೆಣ್ಣಿಗೆ ಮುತ್ತೈದೆ ತನ ಶೋಭೆ
ಹರೆಯದ ಹುಡುಗಿಗೆ ನಾಚಿಕೆ ಶೋಭೆ
ಮಗುವಿನ ಮೊಗದಲ್ಲಿ ಮುಗ್ದ ನಗು ಶೋಭೆ
ದೇವಸ್ಥಾನದಲ್ಲಿ ಘಂಟಾ ನಾದ ಶೋಭೆ
ತುಂಬಿದ ಮನೆಯಲ್ಲಿ ಹಿರಿಯರ ಆಶೀರ್ವಾದ ಶೋಭೆ

Saturday, 8 October 2011

ಭಯ

ಭಯ

ತಂದೆ-ತಾಯಿ ಯರಿಗೆ ಜೀವನ ಎದುರಿಸುವ ಭಯ

ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಭಯ

ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ ಭಯ

ಶಿಷ್ಯರಿಗೆ ಗುರುಗಳನ್ನು ಎದುರಿಸುವ ಭಯ

ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ ಭಯ

ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ ಭಯ

ಗಂಡನಿಗೆ ಹೆಂಡತಿಯ ಭಯ

ಹೆಂಡತಿಗೆ ಗಂಡನ ಭಯ

ಮಕ್ಕಳಿಗೆ ತಂದೆ-ತಾಯಂದಿರ ಭಯ

ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಭಯ !

Friday, 23 September 2011

ಬೀಳ್ಕೊಡುಗೆ



ಹೋಗುವವರೇ ಮರೆಯದಿರಿ ನಮ್ಮನೆಂದೆಂದು, 
ತಿಳಿಯದಿರಿ ನಿಮ್ಮ ಋಣ ತೀರಿತೆಂದೂ 
ಗುರು-ಶಿಷ್ಯರ ಸಂಭಂದವು ಎಂದು ಎಂದೆಂದೂ, 
ಬಿಡಿಸಿಲಾರದಂಥ ಗಂಟು ಎಂದು ಎಂದೆಂದೂ : :

ಬೆಳೆಯುವ ಪೈರು ಮೊಳಕೆಯಲಿ ಎಂಬಂತೆ 
ನೀವೆಲ್ಲ ಮುಂದಿನ ಸತ್ಪ್ರಜೆಯಂತೆ ;
ಶ್ರದ್ದೆಯಿಂದ ಶ್ರಮವಹಿಸಿ ವಿದ್ಯೆ ಗಳಿಸಿರಿ 
ಮುಂದಿನ ಭವಿಷ್ಯಕೆ ಬುನಾದಿ ಹಾಕಿರಿ : :

ಹೋಗುವವರೇ ಮರೆಯದಿರಿ ನಮ್ಮನೆಂದೆಂದು, 
ತಿಳಿಯದಿರಿ ನಿಮ್ಮ ಋಣ ತೀರಿತೆಂದೂ 
ಗುರು-ಶಿಷ್ಯರ ಸಂಭಂದವು ಎಂದು ಎಂದೆಂದೂ, 
ಬಿಡಿಸಿಲಾರದಂಥ ಗಂಟು ಎಂದು ಎಂದೆಂದೂ : :

( ನನ್ನ ನೆಚ್ಚಿನ ೧೦ನೆ ತರಗತಿ ವಿಧ್ಯಾರ್ಥಿ ಗಳಿಗಾಗಿ ನಾನು ರಚಿಸಿ ಹಾಡಿದ್ದು )








 











ದಯಾಮಯ ಭಗವಂತ




ನಾನು ದೇವರನ್ನು  ಭಕ್ತಿ ಇಂದ ಪೂಜಿಸಲು ಪುಷ್ಪವನ್ನು ಬೇಡಿದೆ;
ಅವನೋ ದಯಾಮಯ ದೊಡ್ಡ ಉದ್ಯಾನವನವನ್ನೇ ಕರುಣಿಸಿದ

ನಾನು ಅವನಿಗೆ ಹಣ್ಣುಗಳಿಂದ ನೈವೇದ್ಯ ಮಾಡಲು ಒಂದು ಹಣ್ಣಿನ ಮರವನ್ನು ಬೇಡಿದೆ ;
ಅವನೋ ದಯಾಮಯ ದೊಡ್ಡ ಹಣ್ಣಿನ ತೋಟವನ್ನೇ ದಯಪಾಲಿಸಿದ;

ನಾನು ದೇವರನ್ನು ನನ್ನ ದಾಹ ಇಂಗಿಸಲು ಕುಡಿಯಲು ನೀರು ಬೇಡಿದೆ  ;
ಅವನೋ ದಯಾಮಯ ದೊಡ್ಡ ಸಾಗರವನ್ನೇ ಸೃಷ್ಟಿಸಿದ ;

ನಾನು ದೇವರನ್ನು ನನ್ನ ಹಸಿವು ತಣಿಸಲು ಆಹಾರ  ಬೇಡಿದೆ  ;
ಅವನೋ ದಯಾಮಯ ಪಂಚ ಭಕ್ಷ ಪರಮಾನ್ನ ವನ್ನೇ ನೀಡಿದ

ನಾನು ದೇವರನ್ನು ನನಗೆ ' ತಾಯ್ತನ ' ದಯಾ ಪಾಲಿಸು ಎಂದು ಬೇಡಿದೆ
ಅವನೋ ದಯಾಮಯ ಒಟ್ಟಿಗೆ 'ಅವಳಿ-ಜವಳಿ' ಗಂಡು ಮಕ್ಕಳನ್ನು ಕರುಣಿಸಿ ಹರಸಿದ

ನಾನು ಅವನನ್ನು ಭಕ್ತಿ ಇಂದ ಹಾಡಿ ಹೊಗಳಲು ಒಂದು 'ಭಕ್ತಿ ಗೀತೆ' ಹಾಡಿದೆ
ಅವನೋ ದಯಾಮಯ ನನ್ನನ್ನ ಒಬ್ಬಳು ಒಬ್ಬಳು ಅಪ್ರತಿಮ ಗಾಯಕಿಯನ್ನಾಗಿ ಮಾಡಿದ

ನಾನು ಅವನ್ನನ್ನು ಶ್ರೀ ಹರಿ, ನಾರಾಯಣ , ಪಾಂಡು ರಂಗ,  ರಾಮ, ಕೃಷ್ಣ, ಮುಕುಂದ, ಗೋವಿಂದ
ಎಂದು ಭಜಿಸಲು ಅವನು ನಮಗೆ  ಅರೋಗ್ಯ, ಸಕಲ ಸಂಪತ್ತುಗಳನ್ನೂ ಕರುಣಿಸಿದ
ಅವನೋ ದಯಾಮಯ ಭಗವಂತ ...

Wednesday, 24 August 2011

ಭಾವನೆಗಳು

ಮನದಲಿ ಅರಳುವ ಭಾವನೆಗಳು
ಮುದ ನೀಡುವ ಭಾವನೆಗಳು
ಹಿತ ನೀಡುವ ಭಾವನೆಗಳು
ಕಹಿ ಕಹಿ ಯಾದ  ಭಾವನೆಗಳು
ಸಿಹಿ ಸಿಹಿಯಾದ ಭಾವನೆಗಳು
ಸವಿ ಸವಿಯಾದ ಭಾವನೆಗಳು
ಕೆಲವೊಮ್ಮೆ ಭಾವನೆಗಳು ಅರಳಿ ಪುಷ್ಪಗಳಾಗುತ್ತವೆ
ಕೆಲವೊಮ್ಮೆ ಭಾವನೆಗಳು ಮುದುಡಿದ ತಾವರೆಯಾಗುತ್ತದೆ!!!