Thursday, 11 December 2014







''ನೀರಿನ ಬವಣೆ ''

 

ಎಲ್ಲೋ ಹುಡುಕಿದೆ ಇಲ್ಲದ ನೀರನು ಇಂಗಿ ಹೋಗಿಹ ಈ ಕೊಳದೊಳಗೆ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಅತ್ತೆ ಬೈಯುವಳು ಮನೆಯೊಳಗೇ ::

ನೀರು ಓ ನೀರು ; ಓ ಮಳೆ ನೀರಾದರೂ ಬಂದು ತುಂಬ ಬಾರದೆ ಈ ಕೊಡವ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಹೇಗೆ ಎದುರಿಸಲಿ ಗಂಡನ ಕೋಪವ ::

ಅಪ್ಪ-ಅಮ್ಮನ ಹೆಗಲ ಮೇಲಿನ ಹೊರೆ ಇಳಿಸಲು ನಾ ಯಾಕೆ ಒಪ್ಪಿದೆ ಹಳ್ಳಿಯ ಗಂಡನ
ಒಪ್ಪಿ ಕೊಂಡ ತಪ್ಪಿಗೆ ಅನುಭವಿಸಲೇ ಬೇಕು ನೀರಿಗೆ ಕೊರತೆ ಇರೋ ಈ ಹಳ್ಳಿಯನ ::

ಎನ ಮಾಡಲಿ ಓ ದೇವರೇ ಗಾವುದ ನಡೆದರೂ ನೀರೆ ಕಾಣುತಿಲ್ಲವಲ್ಲ
ಓ ಗಂಗೆ ನೀನ್ಯಾಕೆ ಶಿವನ ಮುಡಿಯಿಂದ ಧರೆಗಿಳಿದು ಬರುತ್ತಿಲ್ಲವಲ್ಲ ::

ಗಾವುದ ನಡೆದು ಬಾಯಾರಿಕೆ ತಣಿಸಲು ಒಂದು ಬೊಗಸೆ ನೀರು ಸಿಕ್ಕರೂ ಸಾಕು
ಆ ಬೊಗಸೆ ನೀರೆ ಅಮೃತವಾಗಿ ನನ್ನಯ ದಣಿವನು ತಣಿಸಲು ಬೇಕೂ ::

ನೀರಿನ ಬವಣೆ ತಪ್ಪಿಸಲೋಸುಗ ನಾನೇ ಊರಿನ '' ಕೆರೆಗೆ ಹಾರವಾಗಿ '' ಸತ್ತರೂ ಸರಿಯೇ
ಓ ಮಳೆರಾಯ ನಿನಗೆ ಬಾರದೆ ಕರುಣೆ , ನನ್ನಯ ಪ್ರಾಣವ ಪಣವಿಟ್ಟರೂ ಸರಿಯೇ ??

Wednesday, 10 December 2014





'' ಮುದ್ದಿನ ಲೇಖನಿ'

ನನಗೇಕೋ ನನ್ನ ಲೇಖನಿಯ ಮೇಲೆ ಇನ್ನಿಲ್ಲದ ಸಿಟ್ಟು 
ಅದೆಲ್ಲಿ ಅವಿತು ಕುಳಿತು ಕೊಂಡಿರುತ್ತದೆಯೋ ತಲೆಕೆಟ್ಟು 
ನನ್ನಲ್ಲಿ ಭಾವನೆಗಳು ಮೂಡಿ ಹೊರ ಬಂದು 
ಇನ್ನೇನು  ಕಾಗದದ ಮೇಲೆ ಬರೆಯ ಬೇಕೆಂದು 
ಹಪ ಹಪಿಸುವಷ್ಟರಲ್ಲೇ ನನ್ನ ಲೇಖನಿಯ ಹುಡುಕಾಟ ಶುರು ::

ಅರೆ ಓ ಲೇಖನಿಯೆ ನಿನಗೇಕೆ ನನ್ನಲಿ ಮುನಿಸು
ಬೇಗ ನನ್ನ ಕಣ್ಣಿಗೆ ಕಾಣಬಾರದೆ ನೀ ತುಸು 
ನೀನು ತಡ ಮಾಡಿದಷ್ಟು ಈ 'ಮರೆವು' ಎಂಬ ಆಕ್ಟೋಪಸ್ 
ನನ್ನ ತಲೆಯಲ್ಲಿ ಕುಳಿತು 'ಪದ ಪುಂಜಗಳ' ಕೂಗುತ್ತೆ ಕೋರಸ್  
ಆಗ ನೋಡಬೇಕು ನನ್ನ ಪರಿಸ್ತಿತಿ ಟುಸ್ ಟುಸ್ ಟುಸ್  ::

ನನ್ನ ಮುದ್ದು ಲೇಖನಿಯೇ ನಾ ಮಾಡಲಾರೆ ನಿನಗೆ ನೋವು  
ನಿನ್ನನ್ನು ಅತಿ ನವಿರಾಗಿ ಸವರಿ; ಮೃದುವಾಗಿ  ಬಳಸುವೆ 
ನಿನ್ನನ್ನು ಜೋಪಾನ ಮಾಡಿದರೆ ತಾನೇ ನಿನಗೆ ನನ್ನಲಿ ಒಲವು 
ಭಯ ಪಡದಿರು ಓ ಲೇಖನಿ ನನಗೂ ನಿನ್ನಲಿ ಒಲವು 
ಹಾಗಾಗಿ   ನನ್ನ ಕವನಗಳ ರೂವಾರಿಯೇ ನೀನಲ್ಲವೇ ::

Tuesday, 9 December 2014



'ಗೋಮಾತೆ'


ಹೇ 'ಗೋಮಾತೆ' ನೀನಷ್ಟು ಒಳ್ಳೆಯವಳು ;
ನೀ ನೀಡುವ ಹಾಲು ಮಕ್ಕಳಿಂದ ವೃದ್ಧರಾದಿಯಾಗಿ ;
ರೋಗಿಗಳಿಗೆ, ಬೆಕ್ಕಿನ ಮರಿಗಳಿಗೆ, ನಾಯಿ ಮರಿಗಳಿಗೆ
ಹೀಗೆ ಪ್ರತಿಯೊಬ್ಬರಿಗೂ ಮುಖ್ಯ ಆಹಾರ
'ಗೃಹ ಪ್ರವೇಶ' ದ ದಿನವಂತೂ ನಿನಗೆ ಪ್ರಥಮ ಸ್ಥಾನ
ನಿನ್ನ ಪೂಜೆಯ ನಂತರವೇ ನಮ್ಮ 'ಗೃಹ ಪ್ರವೇಶ'
ಪ್ರತಿ ಶುಕ್ರವಾರ ಹಾಗೂ ಮಂಗಳವಾರ 'ಗೋ ಪೂಜೆ' ಮಾಡಿದರೆ
ಮುಕ್ಕೋಟಿ ದೇವರ ಪೂಜೆ ಮಾಡಿದಷ್ಟೇ ಪುಣ್ಯ ಎನ್ನುತಿದ್ದಳು ನನ್ನಮ್ಮ
ಅದನ್ನೇ ಪಾಲಿಸುತ್ತಿದ್ದೇನೆ ನಾನು; ನೀ ನಮ್ಮ ಮನೆ ಬಾಗಿಲಿಗೆ ಬಂದು
ಪ್ರತಿ ಶುಕ್ರವಾರ ನನ್ನ ಆತಿಥ್ಯವನ್ನು ಸ್ವೀಕರಿಸಿ ನಮ್ಮನ್ನು ಅಶಿರ್ವರ್ಧಿಸಿ
ನನ್ನ ಪೂಜೆಗೆ ಭಂಗ ತಾರದೆ ಪಾದಗಳಿಗೆ ಅರಿಶಿನ-ಕುಂಕುಮ ಹಚ್ಚುವಾಗ
ನಿನ್ನ ಸುಂದರವಾದ ಕೊಂಬುಗಳಿಗೆ ಹೂ ಇಡುವಾಗ ತಾಳ್ಮೆ ಇಂದ ಇದ್ದು ,
ಸಹಕರಿಸಿದ್ದಕ್ಕೆ ಇದೋ ನಿನಗೆ ಕೋಟಿ ಕೋಟಿ ಪ್ರಣಾಮಗಳು

Sunday, 7 December 2014





''ಹಿತ ನುಡಿಗಳು ''


ಪುಟ್ಟ ವಯಸ್ಸಿನಲ್ಲೇ ಕೆಟ್ಟ ಗುಣಗಳ ದೂರ ಮಾಡು
ಕಲಿಯುವ ವಯಸ್ಸಿನಲ್ಲಿ ಒಳ್ಳೆ ಜ್ಞಾನಾರ್ಜನೆ ಮಾಡು
ಯಾವಾಗಲು ಗುರು ಹಿರಿಯರಿಗೆ ವಿಧೇಯ ನಾಗಿರು
ದೀನ ದಲಿತರಿಗೆ ; ವಿಕಲಾಂಗರಿಗೆ ಸಹಾಯ ಹಸ್ತ ಚಾಚು
ದುಷ್ಟರಿಂದ ದೂರವಿರು, ಶಿಷ್ಟರ ಸಂಗ ತೊರೆಯದಿರು
ಅತ್ಯಾಚಾರ, ಅನಾಚಾರ ಮಾಡದೇ ಸದಾಚಾರಿಯಾಗಿರು
ಪ್ರಾಣಿ, ಪಕ್ಷಿಗಳನ್ನು , ಪ್ರಕೃತಿಯನ್ನು ಸದಾ ಪ್ರೀತಿಸು
'ಕಾಯಕವೇ ಕೈಲಾಸ' ಎಂಬುದನ್ನು ಮರೆಯದಿರು
ಕಷ್ಟ ಪಟ್ಟರೆ ಸುಖವುಂಟು ಎಂಬ ನಾಣ್ನುಡಿ ದಾರಿದೀಪವಾಗಿರಲಿ
ದೇವರನ್ನು ನಂಬು, ಸತ್ಯ-ಧರ್ಮದ ಹಾದಿಯಲ್ಲಿ ನಡೆ
ಸತ್ಯವೇ ದೇವರು, ಧರ್ಮವೇ ದೇವರು
ಒಲವೆ ಜೀವನ ಸಾಕ್ಷಾತ್ಕಾರ
ಜೀವನವ ಸುಖಿಸು, ಪರಿಪೂರ್ಣ ಮಾನವನಾಗು

Tuesday, 2 December 2014






'ತೃಪ್ತಿ '

ನಂದದ ಜ್ಯೋತಿಯ ಬೆಳಗಿ
ಪ್ರೀತಿಯ ಹಂಚೋಣ ತೊಡಗಿ
ಮನೆ ಮನೆಯಲ್ಲೂ ಆರದ ಜ್ಯೋತಿ
ಮನೆ ಮನೆಯಲ್ಲೂ ಕುಂದದ ಪ್ರೀತಿ:

ನಗಿಸಿ ನಲಿಯೋಣ
ಖುಷಿಸಿ ಸುಖಿಸೋಣ
ಹಿರಿಯರ ಸೇವೆ ಮಾಡೋಣ
ಕಿರಿಯರಿಗೆ ಮಾರ್ಗ ತೋರೋಣ:

ನೋಡಿದೆ ಈ ಲೋಕದ ನೋವ
ನೋಡಿದೆ ಈ ಲೋಕದ ನಲಿವಾ
ಇನ್ನೇನು ಬೇಕಿದೆ ಓ ಜೀವವೇ
ಇನ್ನಾದರೂ ಸಿಗಲಿ ಸಾವು ಅಲ್ಲವೇ ??

Wednesday, 19 November 2014






ನಗು :)


ನಗುವೇ ಬದುಕಿನ ಜೀವಾಳ
ನಗುವೇ ಜೀವನದ ಆಧಾರ
ನಗುವಿಲ್ಲದ ಕಳೆಗುಂದಿದ ಮೊಗ
ಆರೋಗ್ಯವ ಹದಗೆಡಿಸಿ ರೋಗ
ಮತ್ಯಾಕೆ ಚಿಂತೆ ?
ರೋಗ ರುಜಿನ ದೂರಗೊಳಿಸಿ
ನಕ್ಕು ಬಿಡಿ ವ್ರುದ್ದಿಸಿ ಆಯುಷ್ಯವ
ನೂರ್ಕಾಲ ಸುಖದ ಬದುಕ ಬಾಳಿ
ಮಾದರಿಯಾಗಲಿ ಎಲ್ಲರಿಗೂ
ನಮ್ಮಯ ಸುಖಮಯ ಬದುಕು
ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ !

Wednesday, 12 November 2014


''ಹೆಮ್ಮರದ ಬಯಕೆ''



ಅಯ್ಯೋ ನಾನು ನಾಳೆ ಬಿದ್ದು ಹೋಗುವ ಮರ
ಹಣ್ಣಾದ ಎಲೆಗಳನ್ನು ನೋಡಿ ಬೇಸತ್ತು ಹೋಗಿದೆ
ಹಸಿರು ಇದ್ದರೆ ಅಷ್ಟೇ ಮರ ನೋಡಲು ಚೆಂದ
ಎಂದು ನನ್ನ ಮುಂದೆ  ಹಾದು ಹೋಗುವವರೆಲ್ಲ
ಹೇಳಿ ಹೇಳಿ ನನಗೆ ಜೀವನದಿ ಜಿಗುಪ್ಸೆಯಾಗಿದೆ  !!!

ಈ ಹಣ್ಣಾಗಿ ಉದುರಿದ ಎಲೆಗಳಿಗೆ ಜೀವವೆಲ್ಲಿ ಇನ್ನು ?
ಆ ನಂತರ ನನ್ನ ಬೇರುಗಳೆಲ್ಲ ಮಣ್ಣಿನಿಂದ ಸಡಿಲಗೊಂಡು
ನನ್ನ ರೆಂಬೆ ಕೊಂಬೇಗಳೆಲ್ಲ ಒಣಗಿ ಹೋಗುತ್ತವೆ
ಕಟ್ಟಿಗೆ ಒಡೆಯುವವ ನನ್ನ ದೇಹಕ್ಕೆ 'ಮುಕ್ತಿ' ಕೊಡುತ್ತಾನೆ

ನಂತರ ನನ್ನನ್ನು ಒಲೆ ಉರಿಸಲು  ಬಳಸಿ ಕೊಳ್ಳುತ್ತಾರೆ
ನನ್ನಿಂದ ವಿಧ ವಿಧವಾದ ಅಡುಗೆ ತಿನಿಸುಗಳನ್ನು ಮಾಡುತ್ತಾರೆ
'ದಯಾ ಮರಣ' ಪಾಲಿಸೆಂದು ಬೇಡಿಕೊಂಡೆ ಆ ದೇವರ
ಅಷ್ಟರಲ್ಲೇ ಮರ ಕಡಿದು ನನ್ನ ದೇಹಕ್ಕೆ ಮುಕ್ತಿ ಕೊಟ್ಟವರ
ನನ್ನ 'ಕೊನೆಯಾಸೆಯಂತೆ'  ನನ್ನ 'ಅಂತ್ಯ ಸಂಸ್ಕಾರ' ಮಾಡಿದವರ
                     ಆ ಭಗವಂತ ನೂರು ವರುಷ
                                                                                                   ಆಯುರಾರೋಗ್ಯ ಕೊಟ್ಟು ಕಾಪಾಡಲಿ



 << ಉಮಾ ಪ್ರಕಾಶ್ >>