ಕಾಡಿಗೆ ಕಣ್ಣಿನ ಬೊಗಸೆ ಕಂಗಳ ಸುಂದರಿ ನಿನ್ನ ನಯನಗಳು ಅದೆಷ್ಟು ಸುಂದರವಾಗಿದೆ ! ಮೋಡದಂತೆ ಹರಡಿರುವ ಕೂದಲ ರಾಶಿ ನಿನ್ನ ಸುಂದರ ಮೊಗಕ್ಕೆ ಇನ್ನಷ್ಟು ಶೋಭೆ !! ವಾಹ್ ಓ ಚೆಲುವೆ ನಿನ್ನ ನೋಡಿದ ಕೂಡಲೇ ಮಾತು ಬಾರದವನು ಕೂಡ ಕವಿತೆ ಹೆಣೆಯುತ್ತಾನೆ .....
ಹಣೆ ಬರಹ ಬರೆದ ಆ ಭಗವಂತ ; ದಯಾಮಯ ಭಗವಂತ ಮೇಲೆ ಕುಳಿತು ನಮ್ಮನ್ನೆಲ್ಲ ನೋಡಿ ನಗುತ ಕುಳಿತ ಬಡವ - ಶ್ರೀಮಂತ ಎಂದು ಭೇದ ಭಾವ ಮಾಡಿದ್ದೆ ನೀವು ಇದಕ್ಕೆ ಹೊಣೆಗಾರ ನಾನಲ್ಲ ಎಂದು ವ್ಯಂಗ್ಯವಾಗಿ ನಕ್ಕ !!!!
ಬತ್ತಿ ಹೋದ ಕಣ್ಣುಗಳಲ್ಲಿ ಕಣ್ಣೀರಿಲ್ಲ ; ಕಣ್ಣೀರಿಗೆ ಬರ ಆದರೆ ಆಸೆ ತುಂಬಿದೆ ಆ ಕಣ್ಣುಗಳಲ್ಲಿ .... ಅಯ್ಯೋ ವಿಧಿಯೇ ಏನಿದು ನಿನ್ನ ಅಟ್ಟಹಾಸ ??