ತೆಂಗಿನ ಮರ ಬೆಳೆಸಿದವನಿಗೆ ಅದರ ಎಳ ನೀರು ಕುಡಿಯೋ ಅದೃಷ್ಟ ಇರೋಲ್ಲ ,
ಜೀವ ತೈದು ಸಾಕಿದ ಮಕ್ಕಳಿಂದ ವೃದ್ಧಾಪ್ಯ ದಲ್ಲಿ ಆಸರೆ ಸಿಗೋದಿಲ್ಲ !!
ತನ್ನ ಮಕ್ಕಳಿಂದ ತನ್ನ ಕೊನೆಗಾಲದಲ್ಲಿ ಆಸರೆ ಬಯಸುವುದು ತಪ್ಪೇ ?
ಯಾರಿಂದ ಏನನ್ನು ಅಪೇಕ್ಷಿಸದೆ ಇದ್ದರೆ ಅವನು ದೇವರಾಗುತ್ತಾನೆ
ಇಲ್ಲದಿದ್ದರೆ ಅವನೊಬ್ಬ 'ಸ್ವಾರ್ಥಿ' , ಕಡು ಸ್ವಾರ್ಥಿ ' ಎಂಬ ಹಣೆ ಪಟ್ಟಿ
ಅಪೇಕ್ಷೆ ಪಟ್ಟರೆನೆ ಅವನನ್ನು ಮನುಷ್ಯ ಎನ್ನುವುದು ಅಲ್ಲವೇ ??
ಖಾಯಿಲೆ ಬಂದಾಗ ' ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ' ಎನ್ನುತ್ತಾರೆ
ಅದೇ ಪ್ರತಿ ಫಲಾಪೇಕ್ಷೆ ಪಟ್ಟರೆ ಮಾತ್ರ ಅದು ತಪ್ಪೇ ?
ಅದು ಮನುಷ್ಯನ ಸಹಜ ಗುಣಗಳಲ್ಲಿ ಒಂದ್ದಲ್ಲವೇ ?
ಹಾಸಿಗೆ ಇದ್ದಷ್ಟೇ ಕಾಲು ಚಾಚು, ದಕ್ಕಿದರೆ ದಕ್ಕಿಸಿಕೊ
ಹಾಲಿನ ಪಾಲು ಹಾಲಿಗೆ, ನೀರಿನ ಪಾಲು ನೀರಿಗೆ,
ಹೆಣ್ಣು, ಹೊನ್ನು, ಮಣ್ಣು ಹಣೆಲಿ ಬರೆದಿದ್ದರೆ ಮಾತ್ರ ಲಭ್ಯ ,
ಎಂಬ ನಾಣ್ಣುಡಿ ಗಳಿಂದ ಮನುಷ್ಯ ಜರ್ಜರಿತನಾಗಿದ್ದಾನೆ
ಇದಕ್ಕೆಲ್ಲಾ ಕೊನೆ ಎಂದೋ ಎಂದರಿಯದೆ ಮಮ್ಮಲ ಮರುಗುತ್ತಿದ್ದಾನೆ ??