Tuesday 22 May 2012


ಹಿಂದಿನ ಭಾವನೆ


ಪ್ರಾರ್ಥಿಸುವ ಮನಸಿನ ಜೊತೆ ಕೋರಿಕೆ ಇರುತ್ತೆ
ಕೋರಿಕೆ ಜೊತೆ ಜೊತೆಗೆ ಧೈನ್ಯತ ಭಾವ ಇರುತ್ತೆ

ಓದುವ ಮನಸುಗಳ ಹಿಂದೆ ಜ್ಞಾನದ ದಾಹ ಇರುತ್ತೆ
ಬರೆಯುವ ಕೈಗಳ ಹಿಂದೆ ಬರೆಯುವ ಹಂಬಲ ಇರುತ್ತೆ

ಪ್ರೀತಿ ಮಾಡುವ ಕಣ್ಣುಗಳ ಹಿಂದೆ ವಾತ್ಸಲ್ಯ ಇರುತ್ತೆ
ಕರುಣೆ ತೋರುವ ಕಣ್ಣುಗಳ ಹಿಂದೆ ಕಾಳಜಿ ಇರುತ್ತೆ

ನಗುವ ಕಣ್ಣುಗಳ ಹಿಂದೆ ಕಣ್ಣೀರು ಇರುತ್ತೆ
ಕೋಪಿಸುವ ಕಣ್ಣುಗಳ ಹಿಂದೆ ಪ್ರೀತಿ ಇರುತ್ತೆ

ಗೆಲುವಿನ ಕಣ್ಣುಗಳ ಹಿಂದೆ ಪರಿಶ್ರಮ ಇರುತ್ತೆ
ರಕ್ಷಣೆ ಮಾಡುವ ಕಣ್ಣುಗಳ ಹಿಂದೆ ಭಯ ಇರುತ್ತೆ

ಹೃದಯದ ಬಡಿತದ ಹಿಂದೆ ಭೀತಿ ಇರುತ್ತೆ
ಹೃದಯದ ಬಡಿತ ನಿಂತರೆ ಉಸಿರು ಹೋಗುತ್ತೆ !

ಶಾಯರಿ - 1

ಭಾವ ಜೀವಿಯಾದ ನನಗೆ ಮರೆವಿನ ಖಾಯಿಲೆ
ಭಾವ ಜೀವಿಯಾದ ನನಗೆ ಮರೆವಿನ ಖಾಯಿಲೆ ......... 

ಸಾಲದ್ದಕ್ಕೆ ಮೇಲಿಂದ ಮೇಲೆ ಕವನಗಳ ಗೀಚೋ ಕಲೆ
ಸಾಲದ್ದಕ್ಕೆ ಮೇಲಿಂದ ಮೇಲೆ ಕವನಗಳ ಗೀಚೋ ಕಲೆ .............

ಡೈರಿಯಲ್ಲಿ ಬರೆಯುವ ಮುನ್ನ ಮನದಾಳದಲ್ಲಿ ಗೀಚಲೇ
ಡೈರಿಯಲ್ಲಿ ಬರೆಯುವ ಮುನ್ನ ಮನದಾಳದಲ್ಲಿ ಗೀಚಲೇ ..........

ಮನದಾಳದಲ್ಲಿ ಗೀಚಿಟ್ಟ ತುಣುಕನ್ನು ಮರೆತೇ ಬಿಡಲೇ
ಮನದಾಳದಲ್ಲಿ ಗೀಚಿಟ್ಟ ತುಣುಕನ್ನು ಮರೆತೇ ಬಿಡಲೇ .........

ಈ 'ಮರೆವು' ಹೆಬ್ಬಾವಿನಂತೆ ತನ್ನ ಕೆನ್ನಾಲಿಗೆ ಚಾಚಿದೊಡೆ
ಈ 'ಮರೆವು' ಹೆಬ್ಬಾವಿನಂತೆ ತನ್ನ ಕೆನ್ನಾಲಿಗೆ ಚಾಚಿದೊಡೆ........

ನನ್ನೆಲ್ಲ ಭಾವನೆಗಳು ಮುದುರಿ ಮಡಿಸಿಟ್ಟ ಕೊಡೆ ಕೊಡೆ ಕೊಡೆ
ನನ್ನೆಲ್ಲ ಭಾವನೆಗಳು ಮುದುರಿ ಮಡಿಸಿಟ್ಟ ಕೊಡೆ ಕೊಡೆ ಕೊಡೆ ............



ಶಾಯರಿ -2


ಬರೆದೂ ಬರೆದೂ ಕನ್ನಡ ಕವನವನ್ನ
      ಬರೆದೂ ಬರೆದೂ ಕನ್ನಡ ಕವನವನ್ನ ......

ಬಳುವಳಿಯಾಗಿ ಪಡೆದೆ ಕನ್ನಡಕವನ್ನ
       ಬಳುವಳಿಯಾಗಿ ಪಡೆದೆ ಕನ್ನಡಕವನ್ನ ......

ಆದರೆ ಮಹಾತ್ಮಾ ಗಾಂಧಿ ಹಾಕಲಿಲ್ಲವೇ ಕನ್ನಡಕವನ್ನ ?
       ಆದರೆ ಮಹಾತ್ಮಾ ಗಾಂಧಿ ಹಾಕಲಿಲ್ಲವೇ ಕನ್ನಡಕವನ್ನ ?.......

ನಾನೂ ಮಹಾತ್ಮರ ಹಾದಿಯಲ್ಲಿ ಸಾಗುವೆ ಇನ್ನು ಮುನ್ನ
         ನಾನೂ ಮಹಾತ್ಮರ ಹಾದಿಯಲ್ಲಿ ಸಾಗುವೆ ಇನ್ನು ಮುನ್ನ..........


ತಬ್ಬಲಿಯ ಕೂಗು

ಅಮ್ಮ ನನ್ನ ಹೆತ್ತಮ್ಮ ನೀನು
ಸಾಕಿ ಬೆಳೆಸಿದ ದೇವತೆ ನೀನು
ನಾನು ಅಂಬೆ ಗಾಲಿಟ್ಟು ನಡೆದಾಗ ಅದೆಷ್ಟು ಆನಂದ ಪಟ್ಟೆಯಮ್ಮ
ನಾನು ನಕ್ಕಾಗ ನಗುವೇ ; ಅತ್ತಾಗ ಅಳುವೇಯಲ್ಲಮ್ಮ ನೀನು ...........
ನಾ ಮೊದಲ ಬಾರಿ 'ಅಮ್ಮ' ಎಂದಾಗ ನಿನ್ನ ಕಣ್ಣು ಮಿಂಚುತ್ತಿತ್ತು
ಆ ಮಿಂಚಿನ ಬೆಳಕಲ್ಲಿ ನನ್ನ 'ನಗು' ಪ್ರಕಾಶಿಸುತಿತ್ತು !!
ನಾನು ತೊದಲ್ನುಡಿ ಕಲಿತಾಗ ನನಗೆ ಅಮ್ಮ, ಅಪ್ಪ, ಅಜ್ಜ, ಅಜ್ಜಿ
ಎಂದು ಪದಗಳ ಪರಿಚಯ ಮಾಡಿಸಿದ ಗುರುವಮ್ಮ ನೀನು
ನನ್ನ ಬಾಲ್ಯದಾಟ ಗಳನ್ನು ನೋಡಿ ಅದೆಷ್ಟು ಖುಷಿ ಪಟ್ಟೆಯಮ್ಮ
ನನ್ನ ಬೆಳವಣಿಗೆ ಕಂಡು ಹಿರಿ ಹಿರಿ ಹಿಗ್ಗುತ್ತಿದೆಯಲ್ಲಮ್ಮ !!
ಆದರೀಗ ನೀನು ಆ ದೇವರ ನಾಡಿಗೆ ಹೋಗಿ
ನನ್ನನ್ನು ತಬ್ಬಲಿ ಮಾಡಿ ಬಿಟ್ತೆಯಲ್ಲಮ್ಮ
'ತಬ್ಬಲಿಯು ನೀನಾದೆ ಮಗನೆ' ಎಂದು ನೀ ಕಣ್ಣಿರಿಟಾಗ
ಈ ಭೂಮಿ ಬಾಯಿ ಬಿಡ ಬಾರದೆ ಎಂದು ರೋದಿಸಿದೆ
ನನ್ನ ರೋದನೆ ಕೇಳುವವ ರಾರಮ್ಮ ???