Wednesday, 14 August 2013

ಪ್ರಕೃತಿ ಸೌಂದರ್ಯ







ಪ್ರಕೃತಿ ಸೌಂದರ್ಯ

ನಾನೊಬ್ಬಳು ಸೌಂದರ್ಯ ಉಪಾಸಕಿ
ಪ್ರಕೃತಿ ಸೌಂದರ್ಯ ಸವಿಯುವ ಕಲೋಪಾಸಕಿ 
ಪ್ರಕೃತಿಯ ಮಡಿಲು ತಾಯಿಯ ಪ್ರೇಮದ ಒಡಲು 
ಜೀವನದಿ ಇನ್ನೇನು ಬೇಕು ತಾಯಿಯ ಆಸರೆ ಇರಲು 

ಪ್ರಕೃತಿಯ ಹಚ್ಚನೆ ಹಸಿರು 
ಕೋಗಿಲೆಯ ಕುಹೂ ಕುಹೂ
ನವಿಲಿನ ಬಾಗಿ ಬಳುಕುವ ನರ್ತನ 
ನೀರಿನಲ್ಲಿ ಮುಳುಗಿ ಮುಳುಗಿ ಏಳುವ 'ಹಂಸ '
ವಾಹ್ ! ಎಂತಹ ಸೊಬಗು ಈ ಧರೆ !
ಇಲ್ಲಿ ಜನ್ಮ ತಳೆದ ನಾನೇ ಧನ್ಯೆ !!!!
ಈ ಪ್ರಕೃತಿ ಸೌಂದರ್ಯ ಸವಿದಷ್ಟೂ 
ನನ್ನ ತೃಷೆ ಇಂಗುವುದಿಲ್ಲ ಎಳ್ಳಷ್ಟೂ !!

2 comments:

  1. ನಿಜ ಪ್ರಕೃತಿ ಒಂದು ಅದ್ಭುತಗಳ ಕಲಾ ಕೃತಿಗಳ ಕಮ್ಮಟ!

    ReplyDelete
    Replies
    1. ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು Badari bro

      Delete