Friday, 21 March 2014




ರಕ್ತದ ಬಣ್ಣ ಒಂದೇ !!!!!




ಎಲ್ಲರಲ್ಲೂ ಹರಿತಿರೋದು ಒಂದೇ ಬಣ್ಣದ ರಕ್ತ ; 
ಆದರೂ ಏಕೆ ಕೆಲವರು ಬೇರೆ ಬೇರೆ ಬಣ್ಣ ತೋರಿಸಿ ಮನುಷ್ಯತ್ವ ಮರೆತು ರಾಕ್ಷಸತ್ವ ಮೆರಿತ್ತಿದ್ದಾರೆ ???? 
ಯಾತಕ್ಕಾಗಿ ಈ ಕೊಲೆ, ಸುಲಿಗೆ, ಕಚ್ಚಾಟ , ಕಾದಾಟ, ದರೋಡೆ, ಮೋಸ, ವಂಚನೆ, ಅನ್ಯಾಯ ಇವೆಲ್ಲ ?? 
ದೈವತ್ವ ಮೆರೆದು ಎಲ್ಲರೂ ದೇವರಾಗಬೇಕಿಲ್ಲಾ !!!! 
ಆದರೆ ಮನುಷ್ಯನಾಗಿ ಹುಟ್ಟಿದ್ದಕ್ಕೆ ಒಳ್ಳೆ ಮನುಷ್ಯರಾಗಿ 
ಯಾರಿಗೂ ತೊಂದರೆ ಕೊಡದಿದ್ದರೆ ಅಂತಹವರೂ ಕೂಡ 'ಸ್ವರ್ಗ' ಸೇರಬಹುದು ; '
'ನರಕ' ವೆಂಬುದೆ ಇರುವುದಿಲ್ಲ ಅಲ್ಲವೇ ???
ಸ್ವರ್ಗವನ್ನು ನಾವೇ ಸೃಷ್ಟಿಸಬಹುದು ಹಾಗೆ ನರಕ ಕೂಡ 
ಏನಾದರು ಆಗು ಮೊದಲು ಒಳ್ಳೆ ಮಾನವನಾಗು 


 ಉಮಾ ಪ್ರಕಾಶ್ 










''ಗಂಡಿಗೊಂದು ಹೆಣ್ಣು ಸೃಷ್ಟಿ ನಿಯಮ ''


''ಅಷ್ಟ ವರ್ಷ ಭವೇತ್ ಕನ್ಯಾ '' ಎಂದು ಹಿಂದೆ ಹಿರಿಯರು ಮಾಡಿದ್ದರು. ಹಾಗಾಗಿ ಹೆಚ್ಚಾಗಿ ಬಾಲ್ಯ ವಿವಾಹಗಳು ಜಾರಿಯಲ್ಲಿತ್ತು. ಆದರಿಂದು ಸರ್ಕಾರ ಹೆಣ್ಣಿಗೆ ೧೮ ಮತ್ತು ಗಂಡಿಗೆ ೨೧ ವಯಸ್ಸು ಮದುವೆಗೆ ಯೋಗ್ಯ ಎಂದು ಕಾನೂನು ಮಾಡಿದೆ, ಅದನ್ನು ಉಲ್ಲಂಘಿಸಿದರೆ ಆ ಮದುವೆಯನ್ನು ತಡೆಯುವ ಹಕ್ಕು ಸಹ ಕಾನೂನಿಗಿದೆ. ಯಾಕೆಂದರೆ ಈಗ ಹೆಣ್ಣು ಮಕ್ಕಳು 'ಅಡುಗೆ ಮನೆ' ಗಷ್ಟೇ ಮೀಸಲಲ್ಲ. ಅವರೂ ಕೂಡ ಹೆಚ್ಚಿನ ವಿದ್ಯಾಹರ್ತೆ ಹೊಂದಿ , ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಹಿಂದಿನ ಕಾಲದ ಹೆಣ್ಣು ಮಕ್ಕಳಂತೆ ತಂದೆ-ತಾಯಿ ಒಪ್ಪಿದ (ತನ್ನ ಒಪ್ಪಿಗೆ ಕೇಳದಿದ್ದರೂ) ವರನನ್ನೇ ಮದುವೆಯಾಗಿ ''ಅನಿವಾರ್ಯತೆ '' ಗೆ ಒಳಗಾಗಿ ಜೀವನ ಸಾಗಿಸುತ್ತಿದರು. ಆದರೀಗ ಹೆಣ್ಣು ಮಕ್ಕಳು ತಮಗೆ ಇಷ್ಟವಾಗುವ ವರನನ್ನು ತಾವೇ ಆಯ್ಕೆ ಕೂಡ ಮಾಡಿ ಕೊಳ್ಳುತ್ತಾರೆ, ಮತ್ತೆ ಕೆಲವರು ತಮ್ಮ ಪೋಷಕರಿಗೆ ತಮಗೆ ಡಾಕ್ಟರ, ಇಂಜಿನಿಯರ್, ಪ್ರೊಫೆಸರ್, ವಿದೇಶಿ ಗಂಡು ಬೇಕೆಂದು ತಾಕೀತು ಮಾಡುತ್ತಾರೆ. ಆದರೆ ವಿಪರ್ಯಾಸ ಎಂದರೆ ಇಂದು ಗಂಡಿಗೆ ೩೦ ಆದರೂ ಹೆಣ್ಣು ಸಿಗುತ್ತಿಲ್ಲ ಎಂಬ ಮಾತು ಹಲವೆಡೆ ಕೇಳಿ ಬರುತ್ತಿದೆ. ಹಾಗಾಗಿ ಈ ಮೇಲೆ ಹೇಳಿದವರನ್ನು ಹೊರತು ಪಡಿಸಿ , ಉಳಿದ ಗಂಡುಗಳಿಗೆ ಹೆಣ್ಣು ಸಿಗದಂತಾಗಿದೆ. ಆದರೂ ಸಹ ಒಂದು ಗಂಡಿಗೆ ಒಂದು ಹೆಣ್ಣು ಬ್ರಹ್ಮ ಸೃಷ್ಟಿಸಿಯೇ ಇರುತ್ತಾನೆ ::