Monday, 18 May 2015

ನ್ಯಾಯಾ ಎಲ್ಲಿದೆ ??





ಏಕೊ ಕಾಣೆ ಯಾಕಾದರೂ ಭಾರತ ದೇಶದಲ್ಲಿ ಹುಟ್ಟಿದೆ
ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ ???
ನಮ್ಮ ಈ ಭ್ರಷ್ಟ  ಕುಯುಕ್ತಿಯ ಸರ್ಕಾರ
ಸತ್ಯವಂತರಿಗೆ, ನೀತಿವಂತರಿಗೆ ,
ಗುಣವಂತರಿಗೆ, ದಕ್ಷ ಹಾಗೂ  ನಿಷ್ಠಾ ವಂತರಿಗೆ
ಆದರ್ಶಪ್ರಾಯರಾದಂಥಹವರಿಗೆ
ಎಂಥಹ ಬಹುಮಾನ ಕೊಡುತ್ತಿದೆ
ಎಂದು ಪ್ರತಿಯೊಬ್ಬರಿಗೂ ತಿಳಿದ ವಿಷಯವೇ ಸರಿ
ದಕ್ಷ ಐ ಏ ಎಸ್  ಅಧಿಕಾರಿ ಡಿ  ಕೆ  ರವಿ
ಅವರಿಗೆ ಇನ್ನು ನ್ಯಾಯ ದೊರೆತ್ತಿಲ್ಲ
ಅಂತಹ  ನಿಷ್ಠಾ ವಂತ ಅಧಿಕಾರಿಯ
ನಿಗೂಢ ಸಾವು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸಿದೆ 
ಒಳ್ಳೆಯ ತನವನ್ನು ಒಗ್ಗೂಡಿಸಿ  ಕೊಳ್ಳಿ 
ಎಂದು ಮಕ್ಕಳಿಗೆ ಉಪದೇಶಿಸುತ್ತಿದ್ದ 
ತಂದೆ-ತಾಯಿ ಯರಿಗೆ ಮಕ್ಕಳು ಕೇಳುವ ಒಂದೇ ಪ್ರಶ್ನೆ 
ಯಾಕಮ್ಮಸತ್ಯ  ನ್ಯಾಯ ನೀತಿ ಧರ್ಮ ಇವೆಲ್ಲ
 ಎಲ್ಲಿ ಮರೆಯಾಗುತ್ತಿದೆ ಇನ್ನು ಮುಂದೆ ಪುಸ್ತಕ ದಲ್ಲಷ್ಟೇ 
ಓದಬೇಕಾಗುತ್ತದೆ, ಕಲ್ಪನೆ ಮಾಡಿ ಕೊಳ್ಳ ಬೇಕಾಗುತ್ತದೆ 
ಹೌದು ನಾನು ಕೂಡ ಉತ್ತರ ಕೊಡಲಾಗದೆ 
ನಿರುತ್ತರ ಳಾ ಗಿದ್ದೇನೆ !!!!

ಇಂತಹ ಒಳ್ಳೆಯ ಮಕ್ಕಳನ್ನು ಉಳಿಸಿ ಕೊಳ್ಳ ಲಾರದ 

ಹೇ ಭಾರತ ಮಾತೆ ನಿನಗೆ ಧಿಕ್ಕಾರವಿರಲಿ 
ಇಂತಹ ಒಳ್ಳೆ ಮಗನನ್ನು ಹೆತ್ತ ಆ ತಾಯಿಗೆ 
ನ್ಯಾಯ ನೀಡದ 'ನ್ಯಾಯ ದೇವತೆ' ನಿನಗೆ ಧಿಕ್ಕಾರವಿರಲಿ 
 F M  ನಲ್ಲಿ ನನ್ನ ಕಿವಿಗೆ ಕರ್ಕಶವಾಗಿ ಕೇಳುತ್ತಿದೆ 
'ನ್ಯಾಯಾ  ಎಲ್ಲಿದೆ ?? 'ನ್ಯಾಯಾ  ಎಲ್ಲಿದೆ ''




ತೋಚಿದ್ದನ್ನು ಗೀಚು


ತೋಚಿದ್ದನ್ನು ಗೀಚು 


ಹೆಣೆಯಲೊಂದು ಬುಟ್ಟಿ ಬೇಕು
ಕಟ್ಟಲು ಬುಟ್ಟಿ ತುಂಬಾ ಹೂ ಬೇಕು
ಹೂಗಳ ಮಾಲೆ ಹಾಕಲು ಬೇಕು
ದೇವರ ಪಟವೊಂದಿರ ಬೇಕು

ದೇವರ ಪಟ ಇಡಲು ಬೇಕೊಂದು
ಪೂಜಾ ಕೊಠಡಿ ಅಲ್ಲಿ ಇರ ಬೇಕು
ಪೂಜಾ ಕೊಠಡಿಯಲ್ಲಿ  ಹಚ್ಚಲು ಜೋಡಿ ದೀಪ ಬೇಕು
ಜೋಡಿ ದೀಪ ಹಚ್ಚಲು  ಜೋಡಿ ಕೈಗಳು ಬೇಕು
ಜೋಡಿ ಕೈಗಳ  ಹಿಂದೆ ಭಕ್ತಿಯ ಭಾವ ಬೇಕು
ಭಕ್ತಿ ಭಾವ ತುಂಬಿದ ಮನಸ್ಸಿಗೆ ಬೇಕು
ಸುಂದರ ಶಾಂತ ವಾತಾವರಣ :::

ಹಾಸಲೊಂದು ಮೆತ್ತನೆ ಹಾಸಿಗೆ ಬೇಕು
ಮೆತ್ತನೆ ಹಾಸಿಗೆ ಮೇಲೆ ಶಾಂತ ನಿದ್ರೆ ಬೇಕು
ನಿದಿರೆಯಲ್ಲಿ  ಸುಂದರ ಕನಸ್ಸು ಮೂಡಬೇಕು
ಕನಸ್ಸಿನಲ್ಲಿ ನಮ್ಮ ಕನಸು ನನಸಾಗ ಬೇಕು
ಕನಸ ಮುಗಿಸಿ ಕಣ್ ತೆರೆದಾಗ
ತುಟಿಯಲ್ಲಿ ಕಿರು ನಗು ಚಿಮ್ಮಬೇಕು  :::

ಬರೆಯಲೊಂದು ಒಳ್ಳೆ ವಿಷಯ ಬೇಕು
ಭಾವನಾಲೋಕದಲ್ಲಿ ವಿಹರಿಸಲು ಬೇಕು
ತೋಚಿದ್ದನ್ನು ಗೀಚ ಬೇಕು
ಗೀಚಿದ ವಿಷಯ ಎಲ್ಲರ ಮ್ಯಾನ್ ಸೆಳೆಯ  ಬೇಕು
ಬರೆಯಲೊಂದು ಒಳ್ಳೆ ವಿಷಯ ಬೇಕು :::



ವರುಣನ ಆರ್ಭಟ






ವರುಣನ ಆರ್ಭಟ

ಈ ಮಳೆಯ ಆರ್ಭಟದಿಂದ ಆಗುತ್ತಿರುವ ಹಾನಿ
ಹಲೋ Mr. ವರುಣ ದೇವ ಇದೇನು ನಿನ್ನ ಕಹಾನಿ ???
ಗುಡುಗು ಸಹಿತ ಬಿರುಗಾಳಿ ಮಳೆ ಇಂದ ಜನರು ಕಂಗಾಲಾಗಿದ್ದಾರೆ
ಎಲ್ಲಿ ನೋಡಿದರೂ ಭಾರಿ ಮರಗಳನ್ನು ಬುಡಮೇಲು ಮಾಡಿರುವೆ 
ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಕಡಿತ ಬೇರೆ
ವರುಣ ವಾಯು ಇವರೀರ್ವರ ಅರ್ಭಟ ತಡೆಯಲಾರೆವು
ಶಾಂತರಾಗಿ ವಾಯು ವರುಣರೆ ಶಾಂತರಾಗಿ
ನಿಮ್ಮ ಈ ವಿಕೋಪದಿಂದ ನಾವು ಮನುಜರಷ್ಟೇ ಅಲ್ಲಾ
ಪ್ರಾಣಿ ಪಕ್ಷಿ ಸಂಕುಲ, ಗಿಡ ಮರಗಳು ಎಲ್ಲರ ಜೀವ ಕೈಗೆ ಬಂದಿದೆ
ಇದರ ಮಧ್ಯೆ ಭೂದೇವಿ ಕೂಡ ಮುನಿಸಿಕೊಂಡು ಕಂಪಿಸಿದರೆ
ನಮ್ಮ ಗತಿ ಅಷ್ಟೇ ಶಿವ ಶಿವ ; ಹರ ಹರ