Thursday, 25 July 2013ಕಾಣದ ದೇವರು ಗುಡಿಯಲಿ ಸಾವಿರಾರು ಸಾವಿರಾರು
ಕಣ್ಣಿಗೆ ಕಾಣುವ ತಾಯಿ-ತಂದೆಯೇ ಮನೆಯಲ್ಲಿರುವ ದೇವರು
ಸುತ್ತಿ ಸುತ್ತಿ ಊರನ್ನೆಲ್ಲ ಗುಡಿಗೆ ಯಾಕೆ ಹೋಗುವಿರಿ
ಮೂರು ಸುತ್ತು ತಾಯಿ-ತಂದೆಯ ಸುತ್ತು ಸುತ್ತುವಿರಿ
ಆಗಲೇ ವೈಕುಂಟ-ಕೈಲಾಸ ಎಲ್ಲಾ ಸುತ್ತಿ ಬಂದಂತೆ
ವೈಕುಂಟವಿಲ್ಲೆ ಕೈಲಾಸವಿಲ್ಲೆ ಓ ನನ್ನ ಹೆತ್ತವರೇ
ಎಲ್ಲ ನಿನ್ನ ಪಾದದಲ್ಲೇ ಇರುವಾಗ ಗುಡಿ ಏಕೆ ಸುತ್ತಲಿ ??