Wednesday, 27 May 2015

ಇಂದ್ರಿಯ ನಿಗ್ರಹ


 ಇಂದ್ರಿಯ  ನಿಗ್ರಹ 

ಸುಂದರ ಮನಸ್ಸು ಮಗುವಿನಂತೆ , ಹೂವಿನಂತೆ, ಧುಮ್ಮಿಕ್ಕುವ ಜಲಧಾರೆಯಂತೆ 
ಎಷ್ಟು ಪ್ರಶಾಂತತೆ ಇಂದ ಕಣ್ಮನ ಸೆಳೆಯುತ್ತದೆಯೋ 
ಅಷ್ಟೇ ಪ್ರಕ್ಷುಬ್ಧ ವಾಗಿ ಒಣಗಿದ ಹೂವಿನಂತೆ, ಬತ್ತಿ ಹೋದ ಜಲಾಶಯದಂತೆ 
ಕಲುಷಿತ ಗೊಂಡ  ಕೆರೆಯಂತೆ ಮನಸ್ಸು ಜರ್ಜರಿತಗೊಂಡರೆ !!!

ಮನಸ್ಸೇ ಓ ಮನಸ್ಸೇ ಎಂಥಾ ಮನಸ್ಸೇ ಮನಸೇ ಒಳ ಮನಸೇ 
ಒಳ ಮನಸನ್ನು ನಿಗ್ರಹಿಸದಿದ್ದರೆ , ಹಿಡಿತದಲ್ಲಿ ಇರದಿದ್ದರೆ 
ಮನಸ್ಸಿಗೆ ಘಾಸಿಯಾದರೆ , ಕ್ಷೋಭೆಯುಂಟಾದರೆ 
ಅದನ್ನು ಹಿಡಿದಿಡುವುದು ಗಾಳಿಯನ್ನು ಹಿಡಿದಿದುವಷ್ಟೇ ಕಷ್ಟ !!!

ಮನಸ್ಸಿನಲ್ಲಿ ಉಂಟಾಗುವ ಕೋರಿಕೆಗಳು 
''ಆಸೆಯೇ ದುಃಖಕ್ಕೆ ಮುಲಾ''   ಎಂಬಂತೆ 
ಆಸೆಗಳು ಈಡೇರ ದಿದ್ದರೆ ಮನಸ್ಸಿನಲ್ಲಿ ಕೋಲಾಹಲ 
ಈಡೇರುವಂತೆ ಮಾಡುವಾಗ ಉಂಟಾಗುವ ಹಾಲಾಹಲ 
ಓ ಮನಸ್ಸೇ ನಿನ್ನ ಪರಿಯ ಬಲ್ಲವರ್ಯಾರು !!!

ಮನಸೆಂಬ ಪಂಜರದಲ್ಲಿ ಪ್ರೀತಿ ಬಂದಾಗ  
ಮುಡುವ ಭಾವನೆ ಆಕರ್ಷಕ, ಸುಂದರ, ಕೋಮಲ, 
ಅದೇ ಮನಸೆಂಬ ಪಂಜರದಲ್ಲಿ ಕ್ರೋಧ ಉಂಟಾದರೆ 
ಆ ಮನಸ್ಸು ವಿಷ ಪೂರಿತವಾಗಿ ವಿಕಾರಗೊಳ್ಳುತ್ತದೆ 
ಯೋಗ ಮಾಡಿ ಮನಸ್ಸನ್ನು ಒಂದೇ ಕಡೆ ಕೇಂದ್ರಿಕೃತ ಗೊಳಿಸಿ 
'ಇಂದ್ರಿಯ ನಿಗ್ರಹ' ಸಾಧ್ಯವಾದರೆ ಮನಸಿನ ಚಂಚಲತೆಯನ್ನು 
ಹೊಡೆದೋಡಿಸಿ ಬೇಡಿಕೆಗಳನ್ನು ತ್ಯಜಿಸಿದರೆ 
ಸುಂದರ ಬಾಳು ನಿಮ್ಮದಾಗುತ್ತದೆ !!!!