ನಾನು ದೇವರನ್ನು ಭಕ್ತಿ ಇಂದ ಪೂಜಿಸಲು ಪುಷ್ಪವನ್ನು ಬೇಡಿದೆ;
ಅವನೋ ದಯಾಮಯ ದೊಡ್ಡ ಉದ್ಯಾನವನವನ್ನೇ ಕರುಣಿಸಿದ
ನಾನು ಅವನಿಗೆ ಹಣ್ಣುಗಳಿಂದ ನೈವೇದ್ಯ ಮಾಡಲು ಒಂದು ಹಣ್ಣಿನ ಮರವನ್ನು ಬೇಡಿದೆ ;
ಅವನೋ ದಯಾಮಯ ದೊಡ್ಡ ಹಣ್ಣಿನ ತೋಟವನ್ನೇ ದಯಪಾಲಿಸಿದ;
ನಾನು ದೇವರನ್ನು ನನ್ನ ದಾಹ ಇಂಗಿಸಲು ಕುಡಿಯಲು ನೀರು ಬೇಡಿದೆ ;
ಅವನೋ ದಯಾಮಯ ದೊಡ್ಡ ಸಾಗರವನ್ನೇ ಸೃಷ್ಟಿಸಿದ ;
ನಾನು ದೇವರನ್ನು ನನ್ನ ಹಸಿವು ತಣಿಸಲು ಆಹಾರ ಬೇಡಿದೆ ;
ಅವನೋ ದಯಾಮಯ ಪಂಚ ಭಕ್ಷ ಪರಮಾನ್ನ ವನ್ನೇ ನೀಡಿದ
ನಾನು ದೇವರನ್ನು ನನಗೆ ' ತಾಯ್ತನ ' ದಯಾ ಪಾಲಿಸು ಎಂದು ಬೇಡಿದೆ
ಅವನೋ ದಯಾಮಯ ಒಟ್ಟಿಗೆ 'ಅವಳಿ-ಜವಳಿ' ಗಂಡು ಮಕ್ಕಳನ್ನು ಕರುಣಿಸಿ ಹರಸಿದ
ನಾನು ಅವನನ್ನು ಭಕ್ತಿ ಇಂದ ಹಾಡಿ ಹೊಗಳಲು ಒಂದು 'ಭಕ್ತಿ ಗೀತೆ' ಹಾಡಿದೆ
ಅವನೋ ದಯಾಮಯ ನನ್ನನ್ನ ಒಬ್ಬಳು ಒಬ್ಬಳು ಅಪ್ರತಿಮ ಗಾಯಕಿಯನ್ನಾಗಿ ಮಾಡಿದ
ನಾನು ಅವನ್ನನ್ನು ಶ್ರೀ ಹರಿ, ನಾರಾಯಣ , ಪಾಂಡು ರಂಗ, ರಾಮ, ಕೃಷ್ಣ, ಮುಕುಂದ, ಗೋವಿಂದ
ಎಂದು ಭಜಿಸಲು ಅವನು ನಮಗೆ ಅರೋಗ್ಯ, ಸಕಲ ಸಂಪತ್ತುಗಳನ್ನೂ ಕರುಣಿಸಿದ
ಅವನೋ ದಯಾಮಯ ಭಗವಂತ ...
ಭಗವಂತ ನಿಮ್ಮ ಪಾಲಿಗೆ ನಿಜವಾಗಲೂ ದಯಾಮಯ. ಮುಂದೆಯೂ ನಿಮ್ಮ ಎಲ್ಲಾ ಮನೋಭಿಷ್ಟಗಳನ್ನು ಆತ ಕರುಣಿಸುತ್ತಲೇ ಇರಲಿ.
ReplyDeleteತಾವು ಗಾಯಕಿ ಎಂಬುದು ಈಗ ಗೊತ್ತಾಯಿತು. ನಮಗೂ ಒಂದು ಮ್ಂ.ಪಿ ೩ ಲಿಂಕ್ ಕಳಿಸಿ.
thank u so much for ur encouragement ; ur comments are always valuable & blessings for me Badarinath Palavalli
ReplyDelete