Wednesday, 25 September 2013

''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' --- ಹರಿಕಥ ಶ್ರವಣ 3





.

''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' ಎಂದು ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಹೇಳಿರೋ ರೂಢಿ ಮಾತು.  ಹೌದು ನೆರೆ-ಹೊರೆಯವರ ಕಷ್ಟಕ್ಕೆ ಆಗ್ಬೇಕು ನಿಜ ಆದ್ರೆ ಅದು ದುರುಪಯೋಗ ಪಡಿಸ್ಕೊಬರ್ದು ಅಲ್ವೇ ?? ನಮ್ ಫ್ಯಾಮಿಲಿ ಯಲ್ಲಂತೂ ನಾವು ಚಿಕ್ಕಂದಿನಿಂದಲೂ ''ಹಾಸಿಗೆ ಇದ್ದಷ್ಟೇ ಕಾಲು ಚಾಚಿ '' ಅನ್ನೋ ಪಾಲಿಸಿಗೆ ಒಗ್ಗಿ ಹೋಗಿ ಬಿಟ್ಟಿದೀವಿ.  ಯಾಕೆಂದ್ರೆ ನಮ್ಮ ತಂದೆ ತಾಯಿ ಕಳಿಸಿದ ಪಾಠ ಅದು.  ''ಯಾವತ್ತೂ ನಮ್ಮ ಕೈ 'ಕೋ'  ಎನ್ನ ಬೇಕೇ ಹೊರತು 'ತಾ' ಅನ್ನ  ಬಾರದು '' ಎಂದು ನಮ್ಮ ತಂದೆ ಪದೇ ಪದೇ ಹೇಳಿ ನಮ್ಮನ್ನು ಅದೇ ರೀತಿ ಬೆಳೆಸಿದರು. ಅದು ಮೊದಲಿನಿಂದಲೂ ನಾವು ನಮ್ಮಲ್ಲಿ ರೂಡಿಸಿಕೊಂದು ನಮ್ಮಲಿ ರಕ್ತ-ಗತ ವಾಗಿ ಬಂದಿದೆ.  ನಮ್ ತಂದೆ ಹೇಳ್ತಿದ್ದರು ನಮಗೆ ಕಷ್ಟ ಬಂದಾಗ ಆ ಪರಮಾತ್ಮನ ಮೊರೆ ಹೋಗಬೇಕೆ ಹೊರತು ಹುಲು ಮಾನವರ ಮುಂದೆ ಸಹಾಯ ಹಸ್ತ ಚಾಚಬಾರದು; ಸಾಧ್ಯವಾದರೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಹೇಳುತ್ತಲೇ ಇದ್ದರು ನಮ್ ಅಪ್ಪಜಿ.  ಎಲ್ಲರ ಕಷ್ಟ-ಸಂಕಷ್ಟ ಗಳನ್ನೂ ಪರಿಹರಿಸೋನು ಆ ದಯಾಮಯ ಭಗವಂತ, ಅವನ ನಾಮಸ್ಮರಣೆ ಮಾಡಿ ಅವನಿಗೆ ಶರಣಾಗಿ ನಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತೆ ಪರಮಾತ್ಮನ ದಯೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯೋಲ್ಲ ಅವನ ಇಚ್ಚೆಯಂತೆ ಎಲ್ಲ ನಡೆಯೋದು ಅದಕ್ಕೆ ಅವನಿಗೆ ಶರಣಾದರೆ ಅವನೇ ದಾರಿ ತೋರುತ್ತಾನೆ ಎಂದು ಹೇಳುತ್ತಲೇ ನಮ್ಮನ್ನು ಒಳ್ಳೆ ದಾರಿಯಲ್ಲಿ ಬೆಳೆಸಿ, ಒಳ್ಳೆ ಮಾರ್ಗದರ್ಶನ ನೀಡಿ ಬೆಳೆಸಿದ ನಮ್ಮನ್ನು ಹೆತ್ತವರಿಗೆ ''ಹಾಟ್ಸ್ ಆಫ್ '' ಹೇಳಲೇ ಬೇಕು.  ನಮ್ಮ ತಂದೆ-ತಾಯಿ ಮಾಡಿದ ಪುಣ್ಯ, ನಮ್ಮ ಹಿರಿಯರ ಆಶೀರ್ವಾದ  ದಿಂದ ಕಷ್ಟದಲ್ಲಿ ಬೆಳೆದು ಬಂದ್ರು ಸಹ ಈಗ ಆ ಪರಮಾತ್ಮನ ದಯೆ ಇಂದ ಒಳ್ಳೆ ಒಂದು ಮಟ್ಟದಲಿ ಅನುಕೂಲವಾಗಿ ಇದ್ದೇವೆ, ನಮ್ಮ ಕೈಲಾದ ಸಹಾಯ ಒಂದು ನಾಲ್ಕು ಜನರಿಗೆ ಮಾಡಿ ಸುಖ-ಶಾಂತಿ ಇಂದ ಬದುಕು ನಡೆಸುತ್ತಿದ್ದೇವೆ. 

ಈ ಪೀಠಿಕೆ  ಯಾಕೆ ಶುರು ಆಯಿತು ಎಂದರೆ ನಮ್ಮ ಪಕ್ಕದ ಮನೆಯ ಒಬ್ಬರು ಬಹಳ ತರಾತುರಿ ಇಂದ ಬಂದು '' ಮೇಡಂ ಏಟಿಎಂ probelem ದುಡ್ಡು ಡ್ರಾ ಮಾಡೋಕೆ ಆಗ್ತಾ ಇಲ್ಲ ಸ್ವಲ್ಪ ಅರ್ಜೆಂಟ್ ಹಾಗಾಗಿ ಸ್ವಲ್ಪ ದುಡ್ಡು ಬೇಕು ಒಂದು ಗಂಟೆ ಯಲ್ಲಿ ಡ್ರಾ ಮಾಡಿ ತಂದು ಕೊಡುತ್ತೇನೆ ಎಂದು ಹೇಳಿ ದುಡ್ಡು ತೆಗೆದು ಕೊಂಡು  ಹೋದೋರು ೧ ದಿನ ಆಯಿತು, ೨ ದಿನ ಆಯಿತು, ೨ ವಾರ ಆಯಿತು ಅವರ ಸುಳಿವಿಲ್ಲ !!!! ಈ ರೀತಿ ಸಮಯ ಸಾಧಕರಿಗೆ ಸುಳ್ಳು ಹೇಳಿ ದುಡ್ಡು ತೆಗೆದು ಕೊಳ್ಳುವ ಅದೆಂಥ ಪರಿಸ್ತಿತಿ ಇತ್ತೋ ನಾ ಬೇರೆ ಕಾಣೆ !  ಎಂಬಲ್ಲಿಗೆ ''ನೆರೆ ಹೊರೆ ಅಂದ್ರೆ ಒಬ್ರಿಗೊಬ್ರು ಆಗ್ಬೇಕು'' ---   ಹರಿ ಕಥಾ ಶ್ರವಣವು ಇಲ್ಲಿಗೆ ಸಮಾಪ್ತಿಯಾಗುವುದು.  ಜೈ ಪುಂಡರೀಕ ವರದೇ ...............ಹರ ಹರ ಮಹಾದೇವ್ !!!!






2 comments:

  1. ಅಕ್ಕ, ನೆರೆ ಮನೆಯವರು ಎಂದರೆ ನನಗೆ ನಮ್ಮ ಹಳೇ ಮನೆ ನೆನಪಾಯಿತು. ನೆರೆಮನೆಯಲ್ಲಿ ಮುದ್ದಾಂ ಮನೆ ಮಾಲಿಕನ ಸಂಸಾರವಿತ್ತು. ನಾವು ಇದ್ದಷ್ಟು ದಿನವೂ ಸಾಸುವೆ, ಕರಿಬೇವು ಸಮೇತ ಅಕ್ಕಿಯನ್ನೂ ಕಡಾ ತೆಗೆದುಕೊಂಡು ಹೋಗುತ್ತಿದ್ದರು. ಅದು one way traffic ವಾಪಸಾತಿ ಇಲ್ಲವೇ ಇಲ್ಲ. ಅವರ ಮನೆಯಲೊಂದು ನಾಯಿ ಇತ್ತು, ಅದು ನಮ್ಮ ಮನೆಯಲೇ ತಿಂದುಂಡು ಪಕ್ಕದ ಮನೆಯಲಿ ಮಲಗುತ್ತಿತ್ತು.

    ನೆರೆ ಮನೆ ಕೆಲವೊಮೆಮ್ಮೆ
    ನೆರೆ ಬರಿಸೋ ಮನೆ!

    ReplyDelete
  2. ನೆರೆ ಮನೆ ಕೆಲವೊಮೆಮ್ಮೆ
    ನೆರೆ ಬರಿಸೋ ಮನೆ! howdu nimma maatu 100% nija. same with our neighbours; always one-way ; coz naavu yaavaattoo sahaa ondu benki kaddi sahaa kelalu obbara mane baagilige hogidde illa. Appa helida haage ''ಯಾವತ್ತೂ ನಮ್ಮ ಕೈ 'ಕೋ' ಎನ್ನ ಬೇಕೇ ಹೊರತು 'ತಾ' ಅನ್ನ ಬಾರದು '' adanne roodhisikondu bandiddeve iduvarevigoo brother. Blog swalpa prob. kannada font select agtaane illa ???? Englishnalli typisiddakke kshame irali

    ReplyDelete