ನೀನೆಂಬುದು ನೀನಲ್ಲ
ನಿನ್ನ ಈ ಶರೀರ ನಿನ್ನದಲ್ಲ
ನೋಡಿಕೋ ನಿನ್ನ ನೀ
ನಿನ್ನ ನಿರ್ಮಲ ಮನಸ್ಸಿನಲ್ಲಿ
ನಿನ್ನ ಪ್ರೀತಿ ವಿಶ್ವಾಸ ಗಳಲ್ಲಿ
ನಿನ್ನ ಮಂದಹಾಸದ ಮುಗುಳ್ ನಗುವಿನಲ್ಲಿ
ನಿನ್ನ ನೋವು-ನಲಿವಿನಲ್ಲಿ,
ನಿನ್ನ ತ್ಯಾಗದಲ್ಲಿ, ನಿನ್ನ ಸ್ನೇಹದಲ್ಲಿ,
ನಿನ್ನ ಗಾನದಲ್ಲಿ, ನಿನ್ನ ನಾಟ್ಯದಲ್ಲಿ,
ನಿನ್ನ ಸತ್ಯ-ಧರ್ಮಗಳಲ್ಲಿ
ನಿನ್ನ ಮಾನವತ್ವದ
ಒಂದೊಂದು ಹೆಜ್ಜೆಯಲ್ಲಿ !
No comments:
Post a Comment