ಸ್ವಾರ್ಥಿ ಮನುಜ
ಮನುಷ್ಯನ ಆಸೆಗಳು ಹುಚ್ಚುಚ್ಚು
ಹಚ್ಚಿ ಉರಿಸುತ್ತಿದೆ ಕಾಡಿಗೆ ಕಿಚ್ಚು
ಹಚ್ಚ ಹಸಿರಿನ ದಟ್ಟ ದಟ್ಟ ಕಾಡನ್ನು
ಮಚ್ಚು ಕೊಡಲಿಗಳಿಂದ ಕೊಚ್ಚಿ ಕೊಚ್ಚಿ
ಕೆಡವಿದೆಯಲ್ಲೋ ಎಲೆ ಹುಚ್ಚು ಮಾನವ
ನಿನಗೆ ಧಿಕ್ಕಾರವಿರಲಿ !
ಕಾಡಿನ ಹಸಿರನ್ನು ಹಾಳುಗೆಡವಿ ಧ್ವಂಸ ಮಾಡುತ್ತಾ
ಮರಗಳನ್ನು ಉರುಳಿಸಿ ; ನಿನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ
ಪ್ರಕೃತಿಯ ಸಂಪತ್ತನ್ನು ಧ್ವಂಸ ಮಾಡಿದೆಯಲ್ಲೋ
ಹೇ ಸ್ವಾರ್ಥಿ ಮನುಜ ನಿನಗೆ ಧಿಕ್ಕಾರವಿರಲಿ !!
ನಗರದಲ್ಲೂ ನಿನ್ನ ಅಟ್ಟಹಾಸ ಮೆರೆದು
ಸಾಲು ಸಾಲು ಮರಗಳನ್ನು ಕೆಡವಿಸಿ
ಬಹು ಮಹಡಿ ಕಟ್ಟಡಗಳ ಕಟ್ಟಿ ಎತ್ತರಿಸಿ
ಪ್ರಕೃತಿಯ ಸೊಬಗ ಕೆಡಿಸಿದೆ ಯಲ್ಲೋ
ಹೇ ಸ್ವಾರ್ಥಿ ಮನುಜ ನಿನಗೆ ಧಿಕ್ಕಾರವಿರಲಿ !!
ವಿನಾಶ ಕಾಲೇ ವಿಪರೀತ ಬುದ್ಧಿ, ಜನಸಂಖ್ಯೆಯ ಹತೋಟಿಯಿಲ್ಲದೆ ಮನುಷ್ಯ ತನ್ನ ಮೂಲ ಸೌಕರ್ಯಗಳಿಗೆ ಪ್ರಕೃತಿಯ ಬಳಸಿಕೊಂಡಿದ್ದು ದುರದೃಷ್ಟಕರ.ಪ್ರಾಕೃತಿಕ ಅಸಮತೋಲನದಿಂದ ಮುಂದೊಂದು ದಿನ ಸರಿಯಾದ ಬೆಲೆತೆತ್ತಲೇ ಬೇಕು.ಚಿತ್ರಕ್ಕೆ ತಕ್ಕಂತೆ ಕವನವ ಸತ್ವಪೂರ್ಣವಾಗಿ,ಸಮರ್ಥವಾಗಿ ಬರೆದಿದ್ದೀರ.
ReplyDeleteಆಧುನಿಕ ವಾಗ್ಮಿ ಹಂಸಲೇಖ ಬರೆದಂತೆ
ReplyDelete"ನರಮನುಷ್ಯ ಕಲಿಯಲ್ಲ
ಅವ ನಡಿಯೋ ದಾರೀಲಿ
ಗರಿಕೇನೂ ಬೆಳೆಯೋಲ್ಲ"
ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು
ReplyDelete