ತೋಚಿದ್ದನ್ನು ಗೀಚು
ಹೆಣೆಯಲೊಂದು ಬುಟ್ಟಿ ಬೇಕು
ಕಟ್ಟಲು ಬುಟ್ಟಿ ತುಂಬಾ ಹೂ ಬೇಕು
ಹೂಗಳ ಮಾಲೆ ಹಾಕಲು ಬೇಕು
ದೇವರ ಪಟವೊಂದಿರ ಬೇಕು
ದೇವರ ಪಟ ಇಡಲು ಬೇಕೊಂದು
ಪೂಜಾ ಕೊಠಡಿ ಅಲ್ಲಿ ಇರ ಬೇಕು
ಪೂಜಾ ಕೊಠಡಿಯಲ್ಲಿ ಹಚ್ಚಲು ಜೋಡಿ ದೀಪ ಬೇಕು
ಜೋಡಿ ದೀಪ ಹಚ್ಚಲು ಜೋಡಿ ಕೈಗಳು ಬೇಕು
ಜೋಡಿ ಕೈಗಳ ಹಿಂದೆ ಭಕ್ತಿಯ ಭಾವ ಬೇಕು
ಭಕ್ತಿ ಭಾವ ತುಂಬಿದ ಮನಸ್ಸಿಗೆ ಬೇಕು
ಸುಂದರ ಶಾಂತ ವಾತಾವರಣ :::
ಹಾಸಲೊಂದು ಮೆತ್ತನೆ ಹಾಸಿಗೆ ಬೇಕು
ಮೆತ್ತನೆ ಹಾಸಿಗೆ ಮೇಲೆ ಶಾಂತ ನಿದ್ರೆ ಬೇಕು
ನಿದಿರೆಯಲ್ಲಿ ಸುಂದರ ಕನಸ್ಸು ಮೂಡಬೇಕು
ಕನಸ್ಸಿನಲ್ಲಿ ನಮ್ಮ ಕನಸು ನನಸಾಗ ಬೇಕು
ಕನಸ ಮುಗಿಸಿ ಕಣ್ ತೆರೆದಾಗ
ತುಟಿಯಲ್ಲಿ ಕಿರು ನಗು ಚಿಮ್ಮಬೇಕು :::
ಬರೆಯಲೊಂದು ಒಳ್ಳೆ ವಿಷಯ ಬೇಕು
ಭಾವನಾಲೋಕದಲ್ಲಿ ವಿಹರಿಸಲು ಬೇಕು
ತೋಚಿದ್ದನ್ನು ಗೀಚ ಬೇಕು
ಗೀಚಿದ ವಿಷಯ ಎಲ್ಲರ ಮ್ಯಾನ್ ಸೆಳೆಯ ಬೇಕು
ಬರೆಯಲೊಂದು ಒಳ್ಳೆ ವಿಷಯ ಬೇಕು :::
No comments:
Post a Comment