Monday, 18 May 2015

ನ್ಯಾಯಾ ಎಲ್ಲಿದೆ ??

ಏಕೊ ಕಾಣೆ ಯಾಕಾದರೂ ಭಾರತ ದೇಶದಲ್ಲಿ ಹುಟ್ಟಿದೆ
ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ ???
ನಮ್ಮ ಈ ಭ್ರಷ್ಟ  ಕುಯುಕ್ತಿಯ ಸರ್ಕಾರ
ಸತ್ಯವಂತರಿಗೆ, ನೀತಿವಂತರಿಗೆ ,
ಗುಣವಂತರಿಗೆ, ದಕ್ಷ ಹಾಗೂ  ನಿಷ್ಠಾ ವಂತರಿಗೆ
ಆದರ್ಶಪ್ರಾಯರಾದಂಥಹವರಿಗೆ
ಎಂಥಹ ಬಹುಮಾನ ಕೊಡುತ್ತಿದೆ
ಎಂದು ಪ್ರತಿಯೊಬ್ಬರಿಗೂ ತಿಳಿದ ವಿಷಯವೇ ಸರಿ
ದಕ್ಷ ಐ ಏ ಎಸ್  ಅಧಿಕಾರಿ ಡಿ  ಕೆ  ರವಿ
ಅವರಿಗೆ ಇನ್ನು ನ್ಯಾಯ ದೊರೆತ್ತಿಲ್ಲ
ಅಂತಹ  ನಿಷ್ಠಾ ವಂತ ಅಧಿಕಾರಿಯ
ನಿಗೂಢ ಸಾವು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸಿದೆ 
ಒಳ್ಳೆಯ ತನವನ್ನು ಒಗ್ಗೂಡಿಸಿ  ಕೊಳ್ಳಿ 
ಎಂದು ಮಕ್ಕಳಿಗೆ ಉಪದೇಶಿಸುತ್ತಿದ್ದ 
ತಂದೆ-ತಾಯಿ ಯರಿಗೆ ಮಕ್ಕಳು ಕೇಳುವ ಒಂದೇ ಪ್ರಶ್ನೆ 
ಯಾಕಮ್ಮಸತ್ಯ  ನ್ಯಾಯ ನೀತಿ ಧರ್ಮ ಇವೆಲ್ಲ
 ಎಲ್ಲಿ ಮರೆಯಾಗುತ್ತಿದೆ ಇನ್ನು ಮುಂದೆ ಪುಸ್ತಕ ದಲ್ಲಷ್ಟೇ 
ಓದಬೇಕಾಗುತ್ತದೆ, ಕಲ್ಪನೆ ಮಾಡಿ ಕೊಳ್ಳ ಬೇಕಾಗುತ್ತದೆ 
ಹೌದು ನಾನು ಕೂಡ ಉತ್ತರ ಕೊಡಲಾಗದೆ 
ನಿರುತ್ತರ ಳಾ ಗಿದ್ದೇನೆ !!!!

ಇಂತಹ ಒಳ್ಳೆಯ ಮಕ್ಕಳನ್ನು ಉಳಿಸಿ ಕೊಳ್ಳ ಲಾರದ 

ಹೇ ಭಾರತ ಮಾತೆ ನಿನಗೆ ಧಿಕ್ಕಾರವಿರಲಿ 
ಇಂತಹ ಒಳ್ಳೆ ಮಗನನ್ನು ಹೆತ್ತ ಆ ತಾಯಿಗೆ 
ನ್ಯಾಯ ನೀಡದ 'ನ್ಯಾಯ ದೇವತೆ' ನಿನಗೆ ಧಿಕ್ಕಾರವಿರಲಿ 
 F M  ನಲ್ಲಿ ನನ್ನ ಕಿವಿಗೆ ಕರ್ಕಶವಾಗಿ ಕೇಳುತ್ತಿದೆ 
'ನ್ಯಾಯಾ  ಎಲ್ಲಿದೆ ?? 'ನ್ಯಾಯಾ  ಎಲ್ಲಿದೆ ''
No comments:

Post a Comment