Thursday 28 July 2011

'ನಾಳೆ '



'ನಾಳೆ ' ಎಂಬುದು ಹಾಳು
ಸೋಮಾರಿಯಾಗದಿರಿ
ಇಂದಿನದು ಇಂದಿಗೆ
ನಾಳೆ ಎಂದೆನ್ನದಿರಿ !

ಇಂದಿನದು ಎಂದರೆ
ಈ ಘಳಿಗೆಯ ಕೆಲಸ
ಆ ಕ್ಷಣವೇ ಮಾಡಿದಿರೋ
ಬದುಕು ಸರಸ
ಇಲ್ಲವೇ ನೀರಸ !

ನಾಳೆ ಎಂಬುದೊಂದು
ದೊಡ್ಡ ಬ್ರಹ್ಮ ರಾಕ್ಷಸ
ಅದರ ಕೈಗೆನಾದರೂ
ನಿಮ್ಮ ಕೆಲಸ ಒಪ್ಪಿಸಿದಿರೋ ಜೋಕೆ !
ಅದರ ವಜ್ರ ಮುಷ್ಟಿಗೆ ಸಿಲುಕಿ
ನಿಮ್ಮ ಕೆಲಸ ಮುಂದುವರಿಯದೇ
ಹಾಗೆ ಉಳಿದು ಬಿಡುತ್ತದೆ !

ನಾಳೆ ಎಂಬುದರ ವಿನಾಶವೇ
ಇಂದು ನಮ್ಮೆಲ್ಲರ ಬಾಳಿಗೆ ಅತಿಶಯವೇ !


1 comment:

  1. ಒಳ್ಳೆಯ ಕವನ, ನಾಳೆ ನಮ್ಮದಾಗಲಿ ಎಂದು ಆಶಿಸೋಣ!ಒಳ್ಳೆಯ ಕವನ, ನಾಳೆ ನಮ್ಮದಾಗಲಿ ಎಂದು ಆಶಿಸೋಣ!

    ReplyDelete