Tuesday, 22 May 2012

ಶಾಯರಿ - 1

ಭಾವ ಜೀವಿಯಾದ ನನಗೆ ಮರೆವಿನ ಖಾಯಿಲೆ
ಭಾವ ಜೀವಿಯಾದ ನನಗೆ ಮರೆವಿನ ಖಾಯಿಲೆ ......... 

ಸಾಲದ್ದಕ್ಕೆ ಮೇಲಿಂದ ಮೇಲೆ ಕವನಗಳ ಗೀಚೋ ಕಲೆ
ಸಾಲದ್ದಕ್ಕೆ ಮೇಲಿಂದ ಮೇಲೆ ಕವನಗಳ ಗೀಚೋ ಕಲೆ .............

ಡೈರಿಯಲ್ಲಿ ಬರೆಯುವ ಮುನ್ನ ಮನದಾಳದಲ್ಲಿ ಗೀಚಲೇ
ಡೈರಿಯಲ್ಲಿ ಬರೆಯುವ ಮುನ್ನ ಮನದಾಳದಲ್ಲಿ ಗೀಚಲೇ ..........

ಮನದಾಳದಲ್ಲಿ ಗೀಚಿಟ್ಟ ತುಣುಕನ್ನು ಮರೆತೇ ಬಿಡಲೇ
ಮನದಾಳದಲ್ಲಿ ಗೀಚಿಟ್ಟ ತುಣುಕನ್ನು ಮರೆತೇ ಬಿಡಲೇ .........

ಈ 'ಮರೆವು' ಹೆಬ್ಬಾವಿನಂತೆ ತನ್ನ ಕೆನ್ನಾಲಿಗೆ ಚಾಚಿದೊಡೆ
ಈ 'ಮರೆವು' ಹೆಬ್ಬಾವಿನಂತೆ ತನ್ನ ಕೆನ್ನಾಲಿಗೆ ಚಾಚಿದೊಡೆ........

ನನ್ನೆಲ್ಲ ಭಾವನೆಗಳು ಮುದುರಿ ಮಡಿಸಿಟ್ಟ ಕೊಡೆ ಕೊಡೆ ಕೊಡೆ
ನನ್ನೆಲ್ಲ ಭಾವನೆಗಳು ಮುದುರಿ ಮಡಿಸಿಟ್ಟ ಕೊಡೆ ಕೊಡೆ ಕೊಡೆ ............ಶಾಯರಿ -2


ಬರೆದೂ ಬರೆದೂ ಕನ್ನಡ ಕವನವನ್ನ
      ಬರೆದೂ ಬರೆದೂ ಕನ್ನಡ ಕವನವನ್ನ ......

ಬಳುವಳಿಯಾಗಿ ಪಡೆದೆ ಕನ್ನಡಕವನ್ನ
       ಬಳುವಳಿಯಾಗಿ ಪಡೆದೆ ಕನ್ನಡಕವನ್ನ ......

ಆದರೆ ಮಹಾತ್ಮಾ ಗಾಂಧಿ ಹಾಕಲಿಲ್ಲವೇ ಕನ್ನಡಕವನ್ನ ?
       ಆದರೆ ಮಹಾತ್ಮಾ ಗಾಂಧಿ ಹಾಕಲಿಲ್ಲವೇ ಕನ್ನಡಕವನ್ನ ?.......

ನಾನೂ ಮಹಾತ್ಮರ ಹಾದಿಯಲ್ಲಿ ಸಾಗುವೆ ಇನ್ನು ಮುನ್ನ
         ನಾನೂ ಮಹಾತ್ಮರ ಹಾದಿಯಲ್ಲಿ ಸಾಗುವೆ ಇನ್ನು ಮುನ್ನ..........

2 comments:

  1. ಶಾಯರಿ - ೧ ರಲ್ಲಿ ಮರೆವಿನ ಕಥನವಿದೆ ಮತ್ತು ಅದನ್ನು ಪ್ರಸ್ತುತಪಡೆಸಿರುವ ಸರಲತೆಯೂ ಮೆಚ್ಚುಗೆಯಾಯಿತು.

    ಶಾಯರಿ - ೨ ರಲ್ಲಿ ಕನ್ನಡ ಕವನ ಮತ್ತು ಕನ್ನಡಕ ತಮಾಷೆಯಾಗಿ ಮೂಡಿ ಮಹಾತ್ಮರ ವಿಚಾರವೂ ಬಂದಿದೆ.

    ಒಟ್ಟಾರೆ ಅಕಾ ಸೂಪರ್ರೂ...

    ReplyDelete
  2. thank u brother; thanks for ur encouragement

    ReplyDelete