ತಬ್ಬಲಿಯ ಕೂಗು
ಅಮ್ಮ ನನ್ನ ಹೆತ್ತಮ್ಮ ನೀನು
ಸಾಕಿ ಬೆಳೆಸಿದ ದೇವತೆ ನೀನು
ನಾನು ಅಂಬೆ ಗಾಲಿಟ್ಟು ನಡೆದಾಗ ಅದೆಷ್ಟು ಆನಂದ ಪಟ್ಟೆಯಮ್ಮ
ನಾನು ನಕ್ಕಾಗ ನಗುವೇ ; ಅತ್ತಾಗ ಅಳುವೇಯಲ್ಲಮ್ಮ ನೀನು ...........
ನಾ ಮೊದಲ ಬಾರಿ 'ಅಮ್ಮ' ಎಂದಾಗ ನಿನ್ನ ಕಣ್ಣು ಮಿಂಚುತ್ತಿತ್ತು
ಆ ಮಿಂಚಿನ ಬೆಳಕಲ್ಲಿ ನನ್ನ 'ನಗು' ಪ್ರಕಾಶಿಸುತಿತ್ತು !!
ನಾನು ತೊದಲ್ನುಡಿ ಕಲಿತಾಗ ನನಗೆ ಅಮ್ಮ, ಅಪ್ಪ, ಅಜ್ಜ, ಅಜ್ಜಿ
ಎಂದು ಪದಗಳ ಪರಿಚಯ ಮಾಡಿಸಿದ ಗುರುವಮ್ಮ ನೀನು
ನನ್ನ ಬಾಲ್ಯದಾಟ ಗಳನ್ನು ನೋಡಿ ಅದೆಷ್ಟು ಖುಷಿ ಪಟ್ಟೆಯಮ್ಮ
ನನ್ನ ಬೆಳವಣಿಗೆ ಕಂಡು ಹಿರಿ ಹಿರಿ ಹಿಗ್ಗುತ್ತಿದೆಯಲ್ಲಮ್ಮ !!
ಆದರೀಗ ನೀನು ಆ ದೇವರ ನಾಡಿಗೆ ಹೋಗಿ
ನನ್ನನ್ನು ತಬ್ಬಲಿ ಮಾಡಿ ಬಿಟ್ತೆಯಲ್ಲಮ್ಮ
'ತಬ್ಬಲಿಯು ನೀನಾದೆ ಮಗನೆ' ಎಂದು ನೀ ಕಣ್ಣಿರಿಟಾಗ
ಈ ಭೂಮಿ ಬಾಯಿ ಬಿಡ ಬಾರದೆ ಎಂದು ರೋದಿಸಿದೆ
ನನ್ನ ರೋದನೆ ಕೇಳುವವ ರಾರಮ್ಮ ???
ನಿಮ್ಮ ಕವಿತೆಯಲ್ಲಿ ತಾಯಿ ಪ್ರೀತಿ ಹೆಪ್ಪುಗಟ್ಟಿದೆ.ಕೆಲವು ಕಡೆ ವಾಚ್ಯವಾದರೂ ಕವಿತೆ ಗಮನ ಸೆಳೆಯುತ್ತದೆ. ಲಂಕೇಶರ ಅವ್ವ ಕವಿತೆ ಓದಿದ್ದರೆ ನಿಮ್ಮ ಕವಿತೆ ಇನ್ನೂ ಬೇರೆ ಸ್ವರೂಪ ಪಡೆಯುತ್ತಿತ್ತು. ಏನೇ ಆಗಲಿ ನಿಮ್ಮ ಪ್ರಯತ್ನಕ್ಕೆ ಭೇಷ್ ಅನ್ನಲೇಬೇಕು
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Parasurama avre
ReplyDelete