ಕಲಿಗಾಲ
ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :
ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕಿಲ್ಲವು
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು
ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು
ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿ ಯಂಥ
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ????
ಉಮಾ ಪ್ರಕಾಶ್
ಅಂತಹ ಪುಣ್ಯಕೋಟಿಯೂ ಇಂದಿನ ಕಾಲಕ್ಕೆ ಸಂದರೆ ಬಹುಶಃ corruptಊ!
ReplyDeleteಸತ್ಯಕ್ಕೆ ಸುಖವಿಲ್ಲ ಸುಳ್ಳಿಗೆ ಸಾವೇ ಇಲ್ಲ ಎಂಬಂತಾಗಿದೆ ಕಲಿಗಾಲದ ಕರಾಳತೆ. ಚೆನ್ನಾಗಿದೆ.
ReplyDeletethank u so much veena bhat ; dhanyavaadagalu :)
Deletethank u so much Badari bro N thanks a lot Veena Bhat avre , ur comments are very valuable for me.
ReplyDelete