Wednesday 10 December 2014





'' ಮುದ್ದಿನ ಲೇಖನಿ'

ನನಗೇಕೋ ನನ್ನ ಲೇಖನಿಯ ಮೇಲೆ ಇನ್ನಿಲ್ಲದ ಸಿಟ್ಟು 
ಅದೆಲ್ಲಿ ಅವಿತು ಕುಳಿತು ಕೊಂಡಿರುತ್ತದೆಯೋ ತಲೆಕೆಟ್ಟು 
ನನ್ನಲ್ಲಿ ಭಾವನೆಗಳು ಮೂಡಿ ಹೊರ ಬಂದು 
ಇನ್ನೇನು  ಕಾಗದದ ಮೇಲೆ ಬರೆಯ ಬೇಕೆಂದು 
ಹಪ ಹಪಿಸುವಷ್ಟರಲ್ಲೇ ನನ್ನ ಲೇಖನಿಯ ಹುಡುಕಾಟ ಶುರು ::

ಅರೆ ಓ ಲೇಖನಿಯೆ ನಿನಗೇಕೆ ನನ್ನಲಿ ಮುನಿಸು
ಬೇಗ ನನ್ನ ಕಣ್ಣಿಗೆ ಕಾಣಬಾರದೆ ನೀ ತುಸು 
ನೀನು ತಡ ಮಾಡಿದಷ್ಟು ಈ 'ಮರೆವು' ಎಂಬ ಆಕ್ಟೋಪಸ್ 
ನನ್ನ ತಲೆಯಲ್ಲಿ ಕುಳಿತು 'ಪದ ಪುಂಜಗಳ' ಕೂಗುತ್ತೆ ಕೋರಸ್  
ಆಗ ನೋಡಬೇಕು ನನ್ನ ಪರಿಸ್ತಿತಿ ಟುಸ್ ಟುಸ್ ಟುಸ್  ::

ನನ್ನ ಮುದ್ದು ಲೇಖನಿಯೇ ನಾ ಮಾಡಲಾರೆ ನಿನಗೆ ನೋವು  
ನಿನ್ನನ್ನು ಅತಿ ನವಿರಾಗಿ ಸವರಿ; ಮೃದುವಾಗಿ  ಬಳಸುವೆ 
ನಿನ್ನನ್ನು ಜೋಪಾನ ಮಾಡಿದರೆ ತಾನೇ ನಿನಗೆ ನನ್ನಲಿ ಒಲವು 
ಭಯ ಪಡದಿರು ಓ ಲೇಖನಿ ನನಗೂ ನಿನ್ನಲಿ ಒಲವು 
ಹಾಗಾಗಿ   ನನ್ನ ಕವನಗಳ ರೂವಾರಿಯೇ ನೀನಲ್ಲವೇ ::

No comments:

Post a Comment