''ನೀರಿನ ಬವಣೆ ''
ಎಲ್ಲೋ ಹುಡುಕಿದೆ ಇಲ್ಲದ ನೀರನು ಇಂಗಿ ಹೋಗಿಹ ಈ ಕೊಳದೊಳಗೆ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಅತ್ತೆ ಬೈಯುವಳು ಮನೆಯೊಳಗೇ ::
ನೀರು ಓ ನೀರು ; ಓ ಮಳೆ ನೀರಾದರೂ ಬಂದು ತುಂಬ ಬಾರದೆ ಈ ಕೊಡವ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಹೇಗೆ ಎದುರಿಸಲಿ ಗಂಡನ ಕೋಪವ ::
ಅಪ್ಪ-ಅಮ್ಮನ ಹೆಗಲ ಮೇಲಿನ ಹೊರೆ ಇಳಿಸಲು ನಾ ಯಾಕೆ ಒಪ್ಪಿದೆ ಹಳ್ಳಿಯ ಗಂಡನ
ಒಪ್ಪಿ ಕೊಂಡ ತಪ್ಪಿಗೆ ಅನುಭವಿಸಲೇ ಬೇಕು ನೀರಿಗೆ ಕೊರತೆ ಇರೋ ಈ ಹಳ್ಳಿಯನ ::
ಎನ ಮಾಡಲಿ ಓ ದೇವರೇ ಗಾವುದ ನಡೆದರೂ ನೀರೆ ಕಾಣುತಿಲ್ಲವಲ್ಲ
ಓ ಗಂಗೆ ನೀನ್ಯಾಕೆ ಶಿವನ ಮುಡಿಯಿಂದ ಧರೆಗಿಳಿದು ಬರುತ್ತಿಲ್ಲವಲ್ಲ ::
ಗಾವುದ ನಡೆದು ಬಾಯಾರಿಕೆ ತಣಿಸಲು ಒಂದು ಬೊಗಸೆ ನೀರು ಸಿಕ್ಕರೂ ಸಾಕು
ಆ ಬೊಗಸೆ ನೀರೆ ಅಮೃತವಾಗಿ ನನ್ನಯ ದಣಿವನು ತಣಿಸಲು ಬೇಕೂ ::
ನೀರಿನ ಬವಣೆ ತಪ್ಪಿಸಲೋಸುಗ ನಾನೇ ಊರಿನ '' ಕೆರೆಗೆ ಹಾರವಾಗಿ '' ಸತ್ತರೂ ಸರಿಯೇ
ಓ ಮಳೆರಾಯ ನಿನಗೆ ಬಾರದೆ ಕರುಣೆ , ನನ್ನಯ ಪ್ರಾಣವ ಪಣವಿಟ್ಟರೂ ಸರಿಯೇ ??

' ಕೆರೆಗೆ ಹಾರವಾಗಿ ' ಮಡಿಯಲೂ ಸರಿಯೇ ಎನ್ನುವ ಕವಿಯತ್ರಿಯ ಅರ್ಪಣಾಭಾವ ಇತರರಿಗೂ ಪಾಠವಾಗುವಂತಿದೆ.
ReplyDeleteಎಲ್ಲೋ ಹುಡುಕಿದೆ... ನೆನಪಾಯಿತು.