Thursday 11 December 2014







''ನೀರಿನ ಬವಣೆ ''

 

ಎಲ್ಲೋ ಹುಡುಕಿದೆ ಇಲ್ಲದ ನೀರನು ಇಂಗಿ ಹೋಗಿಹ ಈ ಕೊಳದೊಳಗೆ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಅತ್ತೆ ಬೈಯುವಳು ಮನೆಯೊಳಗೇ ::

ನೀರು ಓ ನೀರು ; ಓ ಮಳೆ ನೀರಾದರೂ ಬಂದು ತುಂಬ ಬಾರದೆ ಈ ಕೊಡವ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಹೇಗೆ ಎದುರಿಸಲಿ ಗಂಡನ ಕೋಪವ ::

ಅಪ್ಪ-ಅಮ್ಮನ ಹೆಗಲ ಮೇಲಿನ ಹೊರೆ ಇಳಿಸಲು ನಾ ಯಾಕೆ ಒಪ್ಪಿದೆ ಹಳ್ಳಿಯ ಗಂಡನ
ಒಪ್ಪಿ ಕೊಂಡ ತಪ್ಪಿಗೆ ಅನುಭವಿಸಲೇ ಬೇಕು ನೀರಿಗೆ ಕೊರತೆ ಇರೋ ಈ ಹಳ್ಳಿಯನ ::

ಎನ ಮಾಡಲಿ ಓ ದೇವರೇ ಗಾವುದ ನಡೆದರೂ ನೀರೆ ಕಾಣುತಿಲ್ಲವಲ್ಲ
ಓ ಗಂಗೆ ನೀನ್ಯಾಕೆ ಶಿವನ ಮುಡಿಯಿಂದ ಧರೆಗಿಳಿದು ಬರುತ್ತಿಲ್ಲವಲ್ಲ ::

ಗಾವುದ ನಡೆದು ಬಾಯಾರಿಕೆ ತಣಿಸಲು ಒಂದು ಬೊಗಸೆ ನೀರು ಸಿಕ್ಕರೂ ಸಾಕು
ಆ ಬೊಗಸೆ ನೀರೆ ಅಮೃತವಾಗಿ ನನ್ನಯ ದಣಿವನು ತಣಿಸಲು ಬೇಕೂ ::

ನೀರಿನ ಬವಣೆ ತಪ್ಪಿಸಲೋಸುಗ ನಾನೇ ಊರಿನ '' ಕೆರೆಗೆ ಹಾರವಾಗಿ '' ಸತ್ತರೂ ಸರಿಯೇ
ಓ ಮಳೆರಾಯ ನಿನಗೆ ಬಾರದೆ ಕರುಣೆ , ನನ್ನಯ ಪ್ರಾಣವ ಪಣವಿಟ್ಟರೂ ಸರಿಯೇ ??

1 comment:

  1. ' ಕೆರೆಗೆ ಹಾರವಾಗಿ ' ಮಡಿಯಲೂ ಸರಿಯೇ ಎನ್ನುವ ಕವಿಯತ್ರಿಯ ಅರ್ಪಣಾಭಾವ ಇತರರಿಗೂ ಪಾಠವಾಗುವಂತಿದೆ.
    ಎಲ್ಲೋ ಹುಡುಕಿದೆ... ನೆನಪಾಯಿತು.

    ReplyDelete