Wednesday, 27 July 2011

ಅಂತೆ - ಕಂತೆ





ಈ ಜಗವು ಒಂದು ನಾಟಕ ರಂಗವಂತೆ
ನಾವೆಲ್ಲಾ ಇಲ್ಲಿ ಪಾತ್ರಧಾರಿಗಳಂತೆ
ಪಾತ್ರ ನಿರ್ವಹಿಸುವ ರಂಗಸ್ಥಳವಿದಂತೆ
ನಾವೆಲ್ಲಾ ಬಣ್ಣ ಹಚ್ಚ ಬೇಕಂತೆ :
ನಮ್ಮ ನಮ್ಮ ಪಾತ್ರವ ಕಾಯಬೇಕಂತೆ
ನಮ್ಮ ಪಾತ್ರ ಬಂದಾಗ
ನಿರ್ವಹಿಸಬೇಕಂತೆ
ನೈಜ್ಯತೆ ಎದ್ದು ಕಾಣುತಿರಬೇಕಂತೆ
ನಾಟಕೀಯತೆಯ ಸೋಗು ಬೇಡವಂತೆ :
ಹೇಳುವವ ಮಾಡಿಸುತಾನಂತೆ
ಕೇಳಿಸಿಕೊಂಡವ ನಡೆಸುತಾನಂತೆ
ಪುರಾಣ ಹೇಳುವುದಕಂತೆ
ಬದನೆ ಕಾಯಿ ತಿನ್ನುವುದಕಂತೆ !

1 comment:

  1. ಬದನೆಕಾಯಿ ಅಂದಾಗ ಙ್ಞಾಪ್ಕ ಬಂತಕ್ಕಾ, ನನ್ನ ಹೆಂಡ್ತಿ ಎಣ್ಣೆ ಬದನೇ ಕಾಯಿ ಗೊಜ್ಜು, ಭೋ ಪಸಂದಾಗಿ ಮಾಡ್ತಾಳೇ!ಬದನೆಕಾಯಿ ಅಂದಾಗ ಙ್ಞಾಪ್ಕ ಬಂತಕ್ಕಾ, ನನ್ನ ಹೆಂಡ್ತಿ ಎಣ್ಣೆ ಬದನೇ ಕಾಯಿ ಗೊಜ್ಜು, ಭೋ ಪಸಂದಾಗಿ ಮಾಡ್ತಾಳೇ!

    ReplyDelete