ತೋರಿಕೆ !!!!
ಹುಟ್ಟಿದ ಮಕ್ಕಳ್ಳೆಲ್ಲ ಆರೋಗ್ಯವಂತರಾಗಿರೋಲ್ಲ
ಆರೋಗ್ಯವಂತರಿಗೆಲ್ಲ ಪೂರ್ಣ ಆಯಸ್ಸು ಇರೋಲ್ಲ !!
ವೇದಾಂತ ಹೇಳೋರೆಲ್ಲ ವೇದಾಂತಿಗಳಲ್ಲ
ಬುದ್ದಿ ಹೇಳೋರೆಲ್ಲ ಬುದ್ದಿವಂತರಾಗಿರೋಲ್ಲ !!!
ಬೆಳ್ಳಗಿರೋದೆಲ್ಲ ಹಾಲಲ್ಲ ; ಕಹಿ ಎಲ್ಲ ವಿಷವಲ್ಲ
ಕಾಡಿನಲ್ಲಿರೋ ಮರಗಳೆಲ್ಲಾ ಶ್ರೀಗಂಧ ವಾಗಿರೋಲ್ಲ
ಕಲ್ಲಿನ ನಾಗನಿಗೆ ಹಾಲೆರೆಯೋದಲ್ಲ;
ನಿಜವಾದ ಹಾವನ್ನು ಕೊಂದು ಹಾಕೊದಲ್ಲ !!!
ಹಸಿದ ಭಿಕ್ಷುಕನಿಗೆ ಬಡಿಸದೆ ; ಹೊಟ್ಟೆ ತುಂಬಿದವನಿಗೆ ಬಡಿಸೋದಲ್ಲ !!
ತನ್ನ ಮಗುವನ್ನು ಕೆಲಸದವಳ ಕೈಗೆ ಒಪ್ಪಿಸಿ
ತಾನು ನೂರಾರು ಮಕ್ಕಳನ್ನು ನೋಡಿ ಕೊಳ್ಲೋದಲ್ಲ !!!
ತಮ್ಮ ತಟ್ಟೆಯಲ್ಲಿ ಜಿರಳೆ ಬಿದ್ದಿದರೂ
ಬೇರೆಯವರ ತಟ್ಟೆಯಲ್ಲಿ ಇರುವೆ ಹುಡುಕೋದಲ್ಲ !!!
ಸ್ವಯಂ ತಿದ್ದಿಕೊಳ್ಳುವಿಕೆಯಿಂದ ಜಗದ ಹುಳುಕುಗಳು ಕಾಣದಾಗುತ್ತವೆ ಎಂದು ತುಂಬ ಸರಳವಾಗಿ ವಿವರಿಸಿದ್ದೀರ.
ReplyDeletethank u bro
ReplyDelete