Monday 5 May 2014




ತೋರಿಕೆ !!!!

ಹುಟ್ಟಿದ ಮಕ್ಕಳ್ಳೆಲ್ಲ ಆರೋಗ್ಯವಂತರಾಗಿರೋಲ್ಲ
ಆರೋಗ್ಯವಂತರಿಗೆಲ್ಲ ಪೂರ್ಣ ಆಯಸ್ಸು ಇರೋಲ್ಲ !!
ವೇದಾಂತ ಹೇಳೋರೆಲ್ಲ ವೇದಾಂತಿಗಳಲ್ಲ
ಬುದ್ದಿ ಹೇಳೋರೆಲ್ಲ ಬುದ್ದಿವಂತರಾಗಿರೋಲ್ಲ !!!
ಬೆಳ್ಳಗಿರೋದೆಲ್ಲ ಹಾಲಲ್ಲ ; ಕಹಿ ಎಲ್ಲ ವಿಷವಲ್ಲ
ಕಾಡಿನಲ್ಲಿರೋ ಮರಗಳೆಲ್ಲಾ ಶ್ರೀಗಂಧ ವಾಗಿರೋಲ್ಲ
ಕಲ್ಲಿನ ನಾಗನಿಗೆ ಹಾಲೆರೆಯೋದಲ್ಲ;
ನಿಜವಾದ ಹಾವನ್ನು ಕೊಂದು ಹಾಕೊದಲ್ಲ !!!
ಹಸಿದ ಭಿಕ್ಷುಕನಿಗೆ ಬಡಿಸದೆ ; ಹೊಟ್ಟೆ ತುಂಬಿದವನಿಗೆ ಬಡಿಸೋದಲ್ಲ !!
ತನ್ನ ಮಗುವನ್ನು ಕೆಲಸದವಳ ಕೈಗೆ ಒಪ್ಪಿಸಿ
ತಾನು ನೂರಾರು ಮಕ್ಕಳನ್ನು ನೋಡಿ ಕೊಳ್ಲೋದಲ್ಲ !!!
ತಮ್ಮ ತಟ್ಟೆಯಲ್ಲಿ ಜಿರಳೆ ಬಿದ್ದಿದರೂ
ಬೇರೆಯವರ ತಟ್ಟೆಯಲ್ಲಿ ಇರುವೆ ಹುಡುಕೋದಲ್ಲ !!!

2 comments:

  1. ಸ್ವಯಂ ತಿದ್ದಿಕೊಳ್ಳುವಿಕೆಯಿಂದ ಜಗದ ಹುಳುಕುಗಳು ಕಾಣದಾಗುತ್ತವೆ ಎಂದು ತುಂಬ ಸರಳವಾಗಿ ವಿವರಿಸಿದ್ದೀರ.

    ReplyDelete